ಭಟ್ಕಳ ; ತಾಲೂಕಿನ ಪುರಸಭೆ ಮಳಿಗೆ ಹರಾಜು ಸಂದರ್ಭದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಬಿಜೆಪಿ ಮುಂಖಡ ಗೋವಿಂದ ನಾಯ್ಕ ಹಾಗೂ ಕೃಷ್ಣ ಆರಸೆಕೇರೆ ಎನ್ನುವವರಿಗೆ ಇಲ್ಲಿನ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ನೀಡಿದ್ದು ಶುಕ್ರವಾರ ಬಿಡುಗಡೆಯಾಗಿದ್ದಾರೆ. ಆದರೆ ಬಿಡುಗಡೆಯಾದವರನ್ನು ಭಟ್ಕಳಕ್ಕೆ ಕರೆದೊಯ್ಯಲು ಆಗಮಿಸಿದ್ದವರಲ್ಲಿ ಆರು ಜನರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಅಂಗಡಿ ಕಬ್ಜಾ ಸಂಬಂಧ ನಡೆದ ಗಲಾಟೆಗೆ ಸಂಬಂಧಿಸಿದ್ದಂತೆ ದಾಖಲಾಗಿದ್ದ ಪ್ರಕರಣದಲ್ಲಿ ಕೆಲವರು ತಲೆ ಮರಿಸಿಕೊಂಡಿದ್ದರು ಎನ್ನಲಾಗಿತ್ತು. ಅವರೆಲ್ಲ ಗೋವಿಂದ ನಾಯ್ಕ ಹಾಗೂ ಕೃಷ್ಣ ಆಸರಕೇರೆ ಬಿಡುಗಡೆಯಾದ ಬಳಿಕ ಭಟ್ಕಳಕ್ಕೆ ಕರೆದೊಯ್ಯಲು ಶುಕ್ರವಾರ ಕಾರವಾರಕ್ಕೆ ಆಗಮಿಸಿದ್ದರು. ಅದೇ ಸಂದರ್ಭವನ್ನು ಹೊಂಚು ಹಾಕಿಕೊಂಡಿದ್ದ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆಎನ್ನಲಾಗಿದೆ. ಬಂಧಿತರ ಬಗ್ಗೆ ಇನ್ನೇನು ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ.
ಭಟ್ಕಳ ಪುರಸಭೆಯ ಮಳಿಗೆಯ ಮೇಲೆ ಕಲ್ಲು ತೂರಾಟ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಗೋವಿಂದ ನಾಯ್ಕ ಹಾಗೂ ಕೃಷ್ಣಾ ಆರಸಕೇರೆ ಸೇರಿದಂತೆ ಇನ್ನಿತರರ ಮೇಲೆ ದೂರು ದಾಖಲಿಸಿದ್ದರು. ಬಳಿಕ ಭಟ್ಕಳ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಜಾಮೀನಿಗಾಗಿ ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ತಿರಸ್ಕಾರ ಮಾಡಿತ್ತು.
ಬಳಿಕ ಬಂಧಿತರು ಕಾರವಾರದ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಬಂಧಿತರ ಪರ ನ್ಯಾಯವಾದಿ ನಾಗರಾಜ್ ನಾಯಕ ವಿಚಾರಣೆ ಸಂದರ್ಭದಲ್ಲಿ ವಾದ ಮಾಡಿ ವಿಚಾರಣೆ ಬಳಿಕ ಕೋರ್ಟ್ ಇಬ್ಬರಿಗೂ ಬಿಡುಗಡೆ ಮಾಡಿತ್ತು. ಘಟನೆಗೆ ಸಂಬಂಧಿಸಿದಂತೆ ತಲೆ ಮರಿಸಿಕೊಂಡಿದ್ದ ಆರು ಜನರು ಬಿಡುಗಡೆಯಾದ ಗೋವಿಂದ ನಾಯ್ಕ ಹಾಗೂ ಕೃಷ್ಣಾ ಆರಸಕೇರೆ ಇವರನ್ನು ಭಟ್ಕಳಕ್ಕೆ ಕರೆದೊಯ್ಯಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದೆ.
ಜಾಮೀನು ಪಡೆದ 2 ಜನರನ್ನು ಬಿಡುಗಡೆಗೊಳಿಸಿ ಮತ್ತೆ 6 ಜನರನ್ನು ಬಂಧಿಸಿದ ಬಗ್ಗೆ ಸಾರ್ವಜನಿಕರು ತಿಳಿಸಿದ್ದು. ಈಗಾಗಲೇ ಸುಖಾ ಸುಮ್ಮನೆ ಪೋಲೀಸರು ಹಾಗೂ ಜಿಲ್ಲಾಡಳಿತ ಆರೋಪಿಗಳ ಮೇಲೆ ದರೋಡೆಯಂತಹ ಪ್ರಕರ್ಣ ದಾಖಲಿಸುತ್ತಿದೆ ಎಂಬ ಬಗ್ಗೆ ಪ್ರತಿಭಟನೆ ನಡೆದಿತ್ತು. ಈಗ ಮತ್ತೆ ಬಂಧನವಾಗಿದ್ದು ಜನತೆಯ ತಾಳ್ಮೆ ಕೆಡುವಂತೆ ಮಾಡಿದಂತಿದೆ ಎಂದು ಭಟ್ಕಳದ ಪ್ರಮುಖರು ತಿಳಿಸಿದ್ದಾರೆ. ಒಟ್ಟಾರೆ ಪ್ರಕರ್ಣ ೆಲ್ಲಿಗೆ ಹೋಗಿ ತಲುಪುವುದೆಂಬುದನ್ನು ಮಾತ್ರ ಕಾದು ನೋಡಬೇಕು.