ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಹೊನ್ನಾವರ ಹಾಗೂ ಕುಮಟಾದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಿ. ಟಿ. ನಾಯ್ಕ ಹಾಗೂ ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ದಿನಾಂಕ 23 ಹಾಗೂ 24 ರಂದು ಯುವಸ್ಪಂದನ ಅರಿವು ಕಾರ್ಯಕ್ರಮ ಜರುಗಿತು. ಯುವಸ್ಪಂದನ ಯೋಜನಯ ಯುವಪರಿವರ್ತಕಿ ಶಶಿಕಲಾ ನಾಯ್ಕ ಯುವಸ್ಪಂದನದ ಬಗ್ಗೆ ಮಾಹಿತಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಯುವಜನರ ಸರ್ವತೋಮುಖ ಅಭಿವೃದ್ದಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜನ ಆರೋಗ್ಯ ಕೇಂದ್ರ ಎಪಿಡಾಮಿಯಾಲಜಿ ವಿಭಾಗ ನಿಮ್ಹಾನ್ಸ ಬೆಂಗಳೂರು ಇವರ ತಾಂತ್ರಿಕ ನೆರವಿನಿಂದ ವಿನೂತನವಾದ ಯುವ ಸ್ಪಂದನ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಯ ಮೂಲಕ ಯುವಜನರಿಗೆ ಸಮಗ್ರ ಸ್ವಾಭಾವಿಕ, ಮಾನಸಿಕ ಮತ್ತು ಮನೋಸಾಮಾಜಿಕ ಬೆಂಬಲ ಸೇವೆ ನೀಡುವದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಯುವಜನರ ವಿಷಯಕ್ಕೆ ಸಂಬಂದಿಸಿದಂತೆ ಶಿಕ್ಷಣ ಮತ್ತು ವೃತ್ತಿ ವಿಷಯ, ಆರೋಗ್ಯ ಮತ್ತು ಜೀವನ ಶೈಲಿ, ಸಂಬಂಧದ ವಿಷಯಗಳು, ಲಿಂಗ ಮತ್ತು ಲೈಂಗಿಕತೆ, ಸುರಕ್ಷತೆ, ವ್ಯಕ್ತಿತ್ವ ಬೇಳವಣಿಗೆ ಇಂತಹ ಪ್ರಮುಖ ವಿಷಯಕ್ಕೆ ಸಂಬಂಧಿಸಿದ ನಿದ್ರೆಯ ಸಮಸ್ಯೆ, ಅಪೌಷ್ಠಿಕತೆ, ದೈಹಿಕ ಅಸ್ವಸ್ಥತೆ, ಮಾನಸಿಕ ಆರೋಗ್ಯ, ಆಧ್ಯಾತ್ಮಿಕ ಆರೋಗ್ಯ, ವ್ಯಸನಗಳು, ಮೊಬೈಲ ಹಾಗೂ ಅಂತರ್ಜಾಲದ ಬಳಕೆ, ಸ್ವ ಅರಿವಿನ ಕೊರತೆ, ಸ್ವಾಭಿಮಾನದ ಕೊರತೆ, ಭಾವನಾತ್ಮಕ ವಿಷಯಗಳು, ಆಲೋಚನಾಶಕ್ತಿಯ ಕೊರತೆ, ಭಾವನೆಗಳ ನಿರ್ವಹಣೆ, ಕೌಶಲ್ಯಗಳ ಕೊರತೆ, ಗುರಿ ಸಿದ್ಧಪಡಿಸುವುದು (ನಿರ್ಧಾರ), ಏಕಾಗ್ರತೆ, ನೆನಪು, ವೇಳೆಯ ನಿರ್ವಹಣೆ, ಪರೀಕ್ಷೆಯ ಆತಂಕ ಶಿಕ್ಷಣದಲ್ಲಿ ಒತ್ತಡ, ಹೆದರಿಕೆ/ಚುಡಾಯಿಸುವುದು, ವೈಫಲ್ಯದ ಭಯ, ಪಾಲಕರ ಜೊತೆಗಿನ ಸಂಬಂಧ, ತಲೆಮಾರುಗಳ ಸಂಬಂಧ, ವೈವಾಹಿಕ ಸಂಬಂಧ, ಪ್ರೇಮ ಸಂಬಂಧ, ಸಮೀಪವರ್ತಿಗಳ ಸಂಬಂಧ, ವಾಸ್ತವ ಸಂಬಂಧ, ಸಂವಹನದೊಂದಿಗಿನ ಸಂಬಂಧ, ಗಾಯ ಮತ್ತು ಪ್ರಥಮ ಚಿಕಿತ್ಸೆ, ಕಾನೂನು ಮಾಹಿತಿ, ಸೈಬರ್(ಅಂತರ್ಜಾಲ) ಸುರಕ್ಷತೆ, ಲಿಂಗ ಆಧಾರಿತ ಹಿಂಸೆ, ಆತ್ಮಹತ್ಯಯಂತಹ ಭಾವನೆ/ ಪ್ರಯತ್ನಗಳು, ಲಿಂಗ ಪಾತ್ರ, ಲಿಂಗ ತಾರತಮ್ಯ, ಲಿಂಗಾಧರಿತ ಹಿಂಸೆ, ಮಕ್ಕಳಿಗೆ ಲೈಂಗಿಕ ನಿಂದನೆ, ಲೈಂಗಿಕವಾಗಿ ಹರಡುವ ಕಾಯಿಲೆಗಳು ಇಂತಹ ಗೊಂದಲಗಳಿಗೆ ಆಪ್ತಸಮಾಲೋಚನೆ, ಸಲಹೆ ಮತ್ತು ಮಾರ್ಗದರ್ಶನ ಪಡೆಯುವ ಮೂಲಕ ಯುವಜನರು ತಮ್ಮ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ಯೋಜನೆ ಸಹಾಯಕವಾಗಿದೆ. ಪ್ರತಿ ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲಿ ಯುವಸ್ಪಂದನ ಕೇಂದ್ರ ಪ್ರಾರಂಭಗೊಂಡಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರದ ತಹಶೀಲದಾರ ಕಛೇರಿಯ ಕಟ್ಟಡದಲ್ಲಿ ಈ ಕೇಂದ್ರ ಪ್ರಾರಂಭಗೊಂಡಿದೆ. 05 ಜನ ತರಬೇತಿ ಪಡೆದ ಯುವಪರಿವರ್ತಕರು ಹಾಗೂ ಒಬ್ಬ ಯುವಸಮಾಲೋಚಕರು ಈ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.” ಎನ್ನುವ ಮೂಲಕ ಯುವಸ್ಪಂದನ ಯೋಜನೆಯ ಸಂಪೂರ್ಣ ಮಾಹಿತಿ ನೀಡಿ ಯುವ ಜನರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಕರೆ ನೀಡಿದರು.

RELATED ARTICLES  ಸರ್ಕಾರಿ ನೌಕರರಿಗೆ ಪ್ರತಿಶತ 17ರಷ್ಟು ವೇತನ ಹೆಚ್ಚಳ