ಕಾಯಕದಲ್ಲಿ ಕೈಲಾಸ ಕಾಣುವ ಅದೆಷ್ಟೋ ಶ್ರಮಸಂಸ್ಕೃತಿಯ ಆರಾಧಕರು ಇನ್ನೂ ಅಲ್ಲಲ್ಲಿ ಕಾಣ ಸಿಗುತ್ತಾರೆ. ನಮ್ಮವರೇ ಆಗಿ..ನಮಗಿಂತ ಭಿನ್ನವಾಗಿ ಬದುಕನ್ನು ಅಪ್ಪಿಕೊಂಡ..ಒಪ್ಪಿಕೊಂಡ ಜೀವವೊಂದು..ನಮ್ಮ ಒಡನಾಡಿಯಾಗಿ..ನಾಡಿಮಿಡಿದಿದೆ. ಅದು ಯಾರೂ ಅಲ್ಲ. ನಮ್ಮ ನಡುವೆ.. ಕಲಾವಿದರಾಗಿ.. ಕವಿಯಾಗಿ.. ಚಿತ್ರಕಾರರಾಗಿ.. ನಾಟಕಕಾರರಾಗಿ. ಹಾಡುಗಾರರಾಗಿ. .ಮಾತುಗಾರರಾಗಿ.. ಅಡಿಗೆಯವರಾಗಿ.. ಆಗಾಗ ಆಯಾಕ್ಷೇತ್ರಗಳಲಿ ತಮ್ಮನ್ನು ದುಡಿಸಿಕೊಂಡು.. ಸುದ್ದಿಯಾಗುವ ತಿಗಣೇಶ ಮಾಗೋಡು.

ರಾಮಮಂದಿರ ತೀರ್ಪು ಬಂದಾಗ..ಬಿಗಿ ಬಂದೋಬಸ್ತಿನಲ್ಲಿಯೂ ತಮ್ಮ ಊಟದ ಗೂಡಂಗಡಿಯಲ್ಲಿಯೇ ಸುಮಾರು ಐದುನೂರಕ್ಕೂ ಹೆಚ್ಚು ಜನರಿಗೆ ಅನ್ನದಾನಮಾಡಿ…ಆಮೂಲಕ ರಾಮಸೇವೆಗೈದ ತಿಗಣೇಶ…ರಾಮಮಂದಿರ ಲೋಕಾರ್ಪಣೆಗೊಂಡ
ಕ್ಷಣವನ್ನು ತಮ್ಮ ಈಗಿನ ಹಂದಿಗೋಣದಲ್ಲಿರುವ “ನಮ್ಮನೆ ಭಟ್ಟರ ಹೊಟೆಲ್ ” ನಲ್ಲಿ..ಮದ್ಯಾನ್ಹ ಅನ್ನದಾನ ಮಾಡುವ ಮೂಲಕ ಹರ್ಷದಿಂದ ಆಚರಿಸಿಕೊಂಡರು.

RELATED ARTICLES  ಕುಮಟಾ ವೈಭವ-2024 ಕ್ಕೆ ತಾಲೂಕಿನ ಮಣಕಿ ಮೈದಾನದಲ್ಲಿ ಅದ್ದೂರಿ ಚಾಲನೆ

ನಿತ್ಯವೂ ಕೇವಲ ೩೫/- ರೂಪಾಯಿಗೆ ಊಟಕೊಟ್ಟು ಅನೇಕರಿಗೆ..ಪ್ರಿಯರಾಗಿರುವ ಇವರು..ವಿಶೇಷ ಊಟವನ್ನೂ ತಮ್ಮ ಹೊಟೆಲ್ನಲ್ಲಿ ನೀಡುತ್ತ ಬಂದ ಇವರು ಅನೇಕರ ಪ್ರೀತಿಯ ಗಣೇಶಣ್ಣನಾಗಿ ಮಾತೃತ್ವದ ಮಾತಿನೊಂದಿಗೆ ಬಡಿಸುತ್ತಾರೆ.

ರಾಮಮಂದಿರದ ಲೋಕಾರ್ಪಣೆಯ ಸಂದರ್ಭದಲ್ಲಿ ಸುಮಾರು ಎರಡು ನೂರಕ್ಕೂ ‌ ಹೆಚ್ಚು ಜನರು ಉಂಡು ಅನ್ನದಾನಕ್ಕೆ ಸಾಕ್ಷಿಯಾದರು.ಬಹುತೇಕ ದೇವಸ್ಥಾನಗಳಲ್ಲಿ ಇಂತಹದನ್ನು ಕಂಡ ಜನ…ಒಬ್ಬ ಸಾಮಾನ್ಯ ಹೊಟೆಲ್ ಇದ್ಯಮದ ತಿಗಣೇಶರ ಕಾರ್ಯಕ್ಕೆ. ಮೆಚ್ಚಿ..ಹರಸಿದು.ವಿದೇಶದವರ ಬಾಯಲ್ಲಿ ಬಂದ ಜೈ ಶ್ರೀರಾಮ ಘೋಷವಾಕ್ಯ..ಎಲ್ಲರ ಮನ ಸೆಳೆಯಿತು.

RELATED ARTICLES  ಹಿರೇಗುತ್ತಿ ಪದವಿಪೂರ್ವ ಕಾಲೇಜು ಅಂತಃ ಸಂಪತ್ತಿನಿಂದ ಶ್ರೀಮಂತವಾಗಿದೆ : ಹೊನ್ನಪ್ಪ ನಾಯಕ

ಈ ಸಂದರ್ಭದಲ್ಲಿ ಅವರು ಬರೆದ ತಮ್ಮ ವೃತ್ತಿಗಾಗಿನ ವಾಕ್ಯವನ್ನು ನೆನೆವುದಾದರೆ..
“ತಟ್ಟೆ ತೊಳೆದಾ ನೀರು
ತೊಟ್ಟಿ ತುಂಬಿದಹಾಗೆ
ಹೊಟ್ಟೆ ತುಂಬಿದ ಅನುಭವದ ವೃತ್ತಿಯೆನದು..ಎಂದು ಕಾವ್ಯಾತ್ಮಕವಾಗಿ ಕುಟುಕುತ್ತಾರೆ.
ಸೇವೆಯನ್ನೂ ಹೀಗೂ ಮಾಡಬಹುದೆನುವದಕ್ಕೆ..ಮುನ್ನೆಲೆಯ ಪಟವಾಗಿ ನಿಲ್ಲುತ್ತಾರೆ..ನಮ್ಮ ತಿಗಣೇಶಣ್ಣ.