ಕುಮಟಾ : ಜ.೨೪ ರ ಬೆಳಿಗ್ಗೆ ನಿಧನರಾದ ಕುಮಟಾ ತಾಲೂಕಿನ ಚಿತ್ರಿಗಿ ನಿವಾಸಿ ರುಕ್ಮಾಬಾಯಿ ದಯಾನಂದ ಪ್ರಭು (75) ಅವರ ಕಣ್ಣುಗಳನ್ನು ಅವರ ಇಚ್ಚೆ ಯಂತೆ ದಾನ ನೀಡಲಾಯಿತು.

ಮೃತರ ಪುತ್ರಿ ನಿರ್ಮಲಾ ಡಿ.ಪ್ರಭು ರವರ ದೂರವಾಣಿ ಕರೆ ಮೇರೆಗೆ ಕುಮಟಾ ಚಿತ್ರಿಗಿಯಲ್ಲಿನ ನಿವಾಸಕ್ಕೆ ಬೆಳ್ಳಂಬೆಳಿಗ್ಗೆ ಭೇಟಿ ನೀಡಿದ ಕುಮಟಾದ ‘ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆ’ಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಹಾಗೂ ನೇತ್ರತಜ್ಞ ಡಾ. ರಾಜಶೇಖರ ಬಿ. ಅವರ ತಂಡವು ಮೃತರ ಕಣ್ಣುಗಳನ್ನು ಸ್ವೀಕರಿಸಿ, ನೇತ್ರದಾನಕ್ಕೆ ಸಹಕರಿಸಿದ ಮೃತರ ಪತಿ ದಯಾನಂದ ಪ್ರಭು, ಪುತ್ರಿ ನಿರ್ಮಲಾ ಡಿ.ಪ್ರಭು, ಪುತ್ರ ಗಿರಿಧರ ಪ್ರಭು ರವರಿಗೆ ಆಸ್ಪತ್ರೆಯ ಟ್ರಸ್ಟ್ ವತಿಯಿಂದ ಧನ್ಯವಾದ ಸಲ್ಲಿಸಿದರು.

RELATED ARTICLES  ಕ್ರಿಯಾಶೀಲ ವ್ಯಕ್ತಿತ್ವದ ಆರ್. ಎನ್. ಹೆಗಡೆ ಇನ್ನಿಲ್ಲ.

ನಂತರ ಕುಟುಂಬದವರು ಮೃತರ ದೇಹದಾನ ಮಾಡುವ ಬಗ್ಗೆ ಪಾರ್ಥಿವ ಶರೀರವನ್ನು ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕರೆದೊಯ್ದು ದೇಹದಾನ ಪ್ರಕ್ರಿಯೆ ಕೈಗೊಂಡರು. ಸಾವಿನ ನಂತರದಲ್ಲಿಯೂ ರುಕ್ಮಾಬಾಯಿ ಈ‌ಮೂಲಕ ಅಜರಾಮರಳಾದರು. ಇವರ ಹಾಗೂ ಇವರ ಕುಟುಂಬದ ಕಾರ್ಯಕ್ಕೆ ಇದೀಗ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

RELATED ARTICLES  ಬಿಜೆಪಿ ಸಮಾವೇಶ : ಮೋದಿಗಾಗಿ ಒಗ್ಗಟ್ಟಿನಿಂದ ಕಾರ್ಯಮಾಡೋಣವೆಂದ ಗಣ್ಯರು.