ಕುಮಟಾ : ನಮ್ಮ ನೋವು ನಲಿವಿನ ಬಗ್ಗೆ ಹೇಳಿದ್ದನ್ನು ಕೇಳಿಸಿಕೊಳ್ಳಲು ಕುಟುಂಬದವರು, ಸ್ನೇಹಿತರು ಇರುತ್ತಾರೆ. ಆದರೆ ನಾವು ಹೇಳದೇ ನಮ್ಮೊಳಗಿನ ಭಾವವನ್ನು ಕೇಳುವವ ಶ್ರೀರಾಮ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಶ್ರೀಗಳು ಹೇಳಿದರು. ಅವರು ಕುಮಟಾದ ರೈಲ್ವೆ ನಿಲ್ದಾಣದ ಸಮೀಪ ವಿನಾಯಕ ರೆಕ್ಸಿನ್ ಹೌಸ್ ನ ನೂತನ ಕಟ್ಟಡದ ಪ್ರಾರಂಭೋತ್ಸವ ಹಾಗೂ ಶ್ರೀಪಾದುಕಾ ಪೂಜೆ ಮತ್ತು ಭಿಕ್ಷಾಸೇವೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ರಾವಣ ನಿಗ್ರಹಕ್ಕೆ ರಾಮನಾಗಿ ಅವತರಿಸಿದ, ಆ ಕಾಲದಲ್ಲಿ ದೇವತೆಗಳ ಹುಯಲು ಕೇಳಲು ವಿಷ್ಣುವೇ ಬಂದಿದ್ದ. ಕೇಳಿದರೂ ಬರದವರು ಕೆಲವರು, ಕೇಳಿದರೆ ಬರುವವರು ಹಲವರು, ಕೇಳದೆ ತಿಳಿದು ಬರುವವನು ದೇವರು ಮಾತ್ರ ಎಂದು ಅವರು ವಿವರಿಸಿದರು.

RELATED ARTICLES  ಸಿಇಟಿ ವಿದ್ಯಾರ್ಥಿಗಳಿಗಾದ ಅನ್ಯಾಯ ಸರಿಪಡಿಸಲಿ : ಎಂ.ಜಿ ಭಟ್ಟ

ವಿನಾಯಕ ಹೆಗಡೆಕಟ್ಟೆ ಗುರುಗಳ ಪಾದ ಸ್ಪರ್ಶವನ್ನು ಬಯಸಿದ್ದ , ಆದರೆ ರಾಮನ ಪೂಜೆ ನೈವೇದ್ಯ ಎಲ್ಲವೂ ನಡೆದಿದೆ. ಇದುವೇ ಗುರು ಅನುಗ್ರಹ. ಒಳಗಿನ ಮೊರೆ ಎಷ್ಟು ತೀವ್ರವೋ ಅಷ್ಟು ಫಲ. ಹೀಗಾಗಿ ರಾಮನೇ ಪ್ರೇರಣೆಗೊಂಡು ಈ ಕಾರ್ಯ ಮಾಡಿದ್ದಾನೆ ಎಂದರು. ಭಕ್ತಿಗೆ ಗಡಿಯಿಲ್ಲ ಹೀಗಾಗಿ ಅಂಗಡಿಯಲ್ಲಿಯೂ ದೇವರ ಪೂಜೆ ನಡೆಯಬಹುದು ಎಂದು ಅವರು ವಿವರಿಸಿದರು.

RELATED ARTICLES  ಚಿಕಿತ್ಸಾ ವೆಚ್ಚ ಹಾಗೂ ಪರಿಹಾರ ದೊರಕಿಸಿಕೊಡಲು ಆಗ್ರಹ.
IMG 20240128 WA0021

ಈ ಸಂದರ್ಭದಲ್ಲಿ ವಿನಾಯಕ ರೆಕ್ಸಿನ್ ಹೌಸ್ ನ ನೂತನ ಕಟ್ಟಡದ ಅನಾವರಣವನ್ನು ಶ್ರೀಗಳು ನೆರವೇರಿಸಿದರು. ದೀಪ ಬೆಳಗುವ ಮೂಲಕ ಕರ್ಲಾನ್ ಕಾರ್ನರ್ ಉದ್ಘಾಟನೆ ನೆರವೇರಿತು. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ, ಕರ್ಲಾನ್ ಕಂಪನಿಯ ಪ್ರಮುಖರು, ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಹೆಗಡೆ ಹಾಗೂ ಇತರರು ಇದ್ದರು. ವಿನಾಯಕ ಹೆಗಡೆಕಟ್ಟೆ ದಂಪತಿಗಳು ಭಿಕ್ಷಾಸೇವೆ ಹಾಗೂ ಪಾದಪೂಜೆ ನೆರವೇರಿಸಿದರು.