ಕುಮಟಾ : ಸಮಾಜದ ಸೇವೆ ದೇವರ ಸೇವೆಯಿದ್ದಂತೆ. ನಮ್ಮ ಜೊತೆಗೆ ಇತರರನ್ನೂ ಬೆಳೆಸುವ ಹಾಗೂ ಸಮಾಜವನ್ನು ಸಂಘಟಿಸಿ ಮುನ್ನಡೆಯುವ ಕಾರ್ಯ ಇಂದಿನ ಅಗತ್ಯತೆ ಎಂದು ಕಾರವಾರ ದೇವರಭಾಗ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುದಿತಾ ಕೆ.ಪೆಡ್ನೇಕರ ಹೇಳಿದರು. ಪಟ್ಟಣದ  ನೆಲ್ಲಿಕೇರಿಯ ಮಹಾಸತಿ ಸಭಾಭವನದಲ್ಲಿ ರವಿವಾರ ನಡೆದ ಉತ್ತರಕನ್ನಡ ಜಿಲ್ಲಾ ಭಂಡಾರಿ ಸಮಾಜೋನ್ನತಿ ಸಂಘ, ಕುಮಟಾ ಶಾಖೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.  

ರಾಜರ ಕಾಲದಲ್ಲಿ ಸಮಾಜ ಸರ್ವಜನಾಂಗದ ಶಾಂತಿಯ ತೋಟ ಆಗಿತ್ತು. ನಮ್ಮ ಸಮಾಜ ಆರ್ಥಿಕವಾಗಿ ಬಡ ಸಮಾಜ ಇರಬಹುದು. ಆದರೆ ಭೌತಿಕವಾಗಿ ಉತ್ತಮವಾಗಿದೆ. ಆದರೆ ಪ್ರಜಾಪ್ರಭುತ್ವದಲ್ಲಿ ಸ್ವಾರ್ಥ ತಾಂಡವ ಆಡುತ್ತಿದೆ. ಪ್ರತಿಯೊಬ್ಬರೂ ಸಮಾಜದ ಪ್ರಗತಿಗೆ ದುಡಿಯಬೇಕು. ಯುವಕರು ವ್ಯಸನ ಮುಕ್ತ ಆಗಿರಬೇಕು. ಸಮಾಜದ ಅಭ್ಯೂದಯದಲ್ಲಿ ನಾವೆಲ್ಲರೂ ಒಂದಾಗಿ ದುಡಿಯೋಣ ಎಂದು ಅವರು ಅಭಿಪ್ರಾಯಪಟ್ಟರು.

ಬಿರ್ಲಾ ಆಸ್ಪತ್ರೆ ಕಾರವಾರದ ವೈದ್ಯ ಡಾ. ಸಿದ್ದೇಶ.ಯು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ,  ನಮ್ಮ ಸಮಾಜ ಶಿವಾಜಿಯ ನಂಬಿಗಸ್ತ ಸಮಾಜವಾಗಿತ್ತು.  ದೇಶ ಪ್ರೇಮ ಪ್ರಾಮಾಣಿಕತೆ ಹೆಸರಾದ ಸಮಾಜ ನಮ್ಮದೆಂಬ ಹೆಗ್ಗಳಿಕೆ ಇದೆ ಎಂದರು.

RELATED ARTICLES  ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಲಮೂಲ ಬದಲಾವಣೆ ಬಗ್ಗೆ ಇನ್ನೊಮ್ಮೆ ಪರಾಮರ್ಶೆಗೆ ಸೂಚಿಸುವೆ ಎಂದ ಶಾಸಕ ದಿನಕರ ಶೆಟ್ಟಿ.

ಸಭಾಧ್ಯಕ್ಷತೆ ವಹಿಸಿದ್ದ  ಸಂಘದ ಜಿಲ್ಲಾ ಅಧ್ಯಕ್ಷ ಅರುಣ ಮಣಕೀಕರ್ ಮಾತನಾಡಿ,  ಸಮಾಜದ ಸಂಘಟನೆಯಲ್ಲಿ ಯುವಕರು ಪಾಲ್ಗೊಳ್ಳಬೇಕು. ನಮಗೆ ರಾಮಚಂದ್ರಾಪುರಮಠದ ಹಾಗೂ ಗುರುಗಳ ಅನುಗ್ರಹ ಇದೆ. ಗುರುಗಳ ಮಾರ್ಗದರ್ಶನದಲ್ಲಿ ಗೋಕರ್ಣದ ಅಶೋಕೆಯಲ್ಲಿ ಜಿಲ್ಲೆಯ ಸಮಾಜದ ವತಿಯಿಂದ ಸಮ್ಮೇಳನ ಆಯೋಜಿಸುವ ಬಯಕೆ ಇದೆ. ಇದು ಸಾಕಾರಗೊಳ್ಳಬೇಕೆಂದರೆ ಸರ್ವರೂ ಸಹಕಾರ ನೀಡಬೇಕು ಎಂದರು.

ಜಿಲ್ಲಾ ಗೌರವಾಧ್ಯಕ್ಷ ವಿ.ಎಂ ಭಂಡಾರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿಯ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.  ಅನಾರೋಗ್ಯ ಪೀಡಿತ ಆರ್ಥಿಕವಾಗಿ ಸಬಲರಲ್ಲದವರಿಗೆ ವೈದ್ಯಕೀಯ ಸಹಾಯಧನ ನೀಡಲಾಯಿತು.

ಸಭೆಯಲ್ಲಿ ನಾರ್ತಕೆನರಾ ಭಂಡಾರಿ ಸಮಾಜ ಸಂಘ ಗೋವಾದ ಅಧ್ಯಕ್ಷ ಶರತ್ ಪಡುವಳಕರ್, ಕಾರವಾರ ತಾಲೂಕ ಅಧ್ಯಕ್ಷ ಮೋಹನ ಕಿಂದಳಕರ್, ಭಟ್ಕಳದ ಅಧ್ಯಕ್ಷ ಗಣೇಶ ದೇಶಭಂಡಾರಿ, ಹೊನ್ನಾವರ ತಾಲೂಕಾ ಅಧ್ಯಕ್ಷ ಶ್ರೀಕಾಂತ ದೇಶಭಂಡಾರಿ,  ಅವರ್ಸಾ ಘಟಕದ ಅಧ್ಯಕ್ಷ. ಸುಧಾಕರ್  ಮಯೇಕರ್,  ಕುಮಟಾ ತಾಲೂಕ ಅಧ್ಯಕ್ಷ ಶ್ರೀಧರ ಬೀರಕೋಡಿ, ಮಹಿಳಾ ಸಂಘದ ಸುಷ್ಮಾ ಗಾಂವ್ಕರ್, ಕಾರ್ಯದರ್ಶಿ ಚಿದಾನಂದ ಭಂಡಾರಿ ಉಪಸ್ಥಿತರಿದ್ದರು.

RELATED ARTICLES  ಭಾಗವತ್ ಆಸ್ಪತ್ರೆಯಲ್ಲಿ ಸೇವೆ ಪ್ರಾರಂಭಿಸುತ್ತಿರುವ ಡಾ. ಸುಮಂತ್ ಬಳಗಂಡಿ

ಕಾರ್ಯಕ್ರಮದಲ್ಲಿ ತಾಲೂಕಾ ಸಂಘಟನೆಯ ವತಿಯಿಂದ ಜಿಲ್ಲಾಧ್ಯಕ್ಷ ಅರುಣ ಮಣಕೀಕರ್ ಹಾಗೂ ಲೋಕೋಪಯೋಗಿ ಇಲಾಖೆ ಕುಮಟಾದ ಅಭಿಯಂತರ ಸೋಮನಾಥ ಭಂಡಾರಿ ಇವರನ್ನು ಸನ್ಮಾನಿಸಲಾಯಿತು. ಸನತ್ ಭಂಡಾರಿ  ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮಕ್ಕೆ  ಶ್ರೀಧರ ಬೀರಕೋಡಿ ಸ್ವಾಗತಿಸಿದ್ದರು.  ಗೌರೀಶ ಭಂಡಾರಿ, ಹರ್ಷಿತಾ ಭಂಡಾರಿ, ಯಶಸ್ವಿನಿ ಮಣಕೀಕರ್, ವೈಭವಿ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ  ಸಮಾಜದ ವಿದ್ಯಾರ್ಥಿಗಳು ವಿವಿಧ ಮನರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಕು. ಬಿಂದು ಪ್ರೀತಂ ಮಣಕೀಕರ್ ಯಕ್ಷಗಾನ ನೃತ್ಯ ಪ್ರದರ್ಶಿಸಿದ್ದಳು.