ಕುಮಟಾ ; ನವೆಂಬರ್ ಒಂದು ಬಂತೆಂದರೆ ಸಾಕು ಒಂದು ರೀತಿಯ ಕುಟುಂಬದಲ್ಲಿ ನಡೆಸೋ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತದೆ. ಎಲ್ಲೆಡೆ ಹಾರಾಡುವ ಕನ್ನಡದ ಧ್ವಜಗಳು, ಕನ್ನಡ ಗೀತೆಯದ್ದೇ ಕಾರುಬರು. ಹೌದು ಎಲ್ಲೆಡೆ ಕನ್ನಡದ ಹಬ್ಬ ಕಳೆಗಟ್ಟುವುದು ಸಾಮಾನ್ಯ. ಆದರೆ ಕುಮಟಾದಲ್ಲಿ ವಿಶೇಷವಾಗಿ ಕನ್ನಡದ ಹಬ್ಬವನ್ನು ಆಚರಿಸಲಾಗುತ್ತದೆ. ಅದುವೇ “ನುಡಿ ಹಬ್ಬ”. ಕಳೆದ ಅನೇಕ ವರ್ಷಗಳಿಂದ ಶ್ರೀ ಎಂ.ಜಿ ಭಟ್ಟರವರ ನೇತ್ರತ್ವದಲ್ಲಿ ಅತ್ಯುತ್ತಮ ರೀತಿಯಲ್ಲಿ ಸಂಘಟನೆಗೊಳ್ಳುತ್ತಿರುವ ಈ ನುಡಿ ಹಬ್ಬದ ಕುರಿತಾಗಿ ಈ ವರ್ಷವೂ ಸಾಕಷ್ಟು ಕುತೂಹಲಗಳು ಜನತೆಯಲ್ಲಿದೆ.

ಯಾವುದೇ ಸ್ವಾರ್ಥದ ಆಸೆ ಇಲ್ಲದೆ ನುಡಿ ಹಬ್ಬವನ್ನು ಯಶಸ್ಸಿನತ್ತ ಕೊಂಡೊಯುತ್ತಿರುವ ಶ್ರೀ ಎಂ.ಜಿ ಭಟ್ಟರವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವರ್ಷವೂ ಬಹಳ ಅದ್ಧೂರಿಯಾಗಿ ನುಡಿ ಹಬ್ಬವನ್ನು ಆಚರಿಸುವ ಯೋಜನೆ ಈಗಾಗಲೇ ಸಿದ್ಧಗೊಳ್ಳುತ್ತಿದೆ. ಸುಸಂಘಟಿತ ಹಾಗೂ ಅತ್ಯಂತ ವರ್ಣರಂಜಿತ ಕಾರ್ಯಕ್ರಮಗಳು ಕನ್ನಡದ ಕಂಪು ಪಸರಿಸಲಿದೆ. ಶ್ರೀ ಎಂ ಜಿ ಭಟ್ಟರವರು ಹಾಗೂ ಮನೀಶ ನಾಯ್ಕ, ಆರ್.ಜಿ ನಾಯ್ಕ, ಹರೀಶ್ ಶೆಟ್, ಹೇಮಂತಕುಮಾರ ಗಾಂವ್ಕರ ಅವರ ಜೊತೆಗೂಡಿದ ರಾಜ್ಯೋತ್ಸವ ಸಮಿತಿಯ ಇನ್ನೂ ಅನೇಕರು ಹಾಗೂ ಹೆಸರು ಬಯಸದ ನೂರಾರು ಕಾರ್ಯಕರ್ತರು ಸೇರಿ ಕನ್ನಡ ಹಬ್ಬದ ಪೂರ್ವ ಸಿದ್ಧತೆಯಲ್ಲಿ ಈಗಾಗಲೇ ತೊಡಗಿಕೊಂಡಿದ್ದಾರೆ.

RELATED ARTICLES  ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ ಗೋಕರ್ಣ ಪೊಲೀಸರು.

ವಿಶೇಷವಾಗಿ ನಡೆಯುವ ಉಪನ್ಯಾಸ, ಕನ್ನಡ ಡಿಂಡಿಮ ಹಾಗೂ ಕುಮಟಾದಲ್ಲಿ ಅತ್ಯಂತ ವೈಭವೋಪೇತವಾಗಿ ನಡೆಯುವ ಮೆರವಣಿಗೆಗಳ ಸಿದ್ಧತೆ ಹಾಗೂ ಸಂಯೋಜನೆ ನಡೆದಿದೆ. ಹಂತ ಹಂತದಲ್ಲಿ ಸಭೆ ಕರೆದು ಚರ್ಚಿಸಿ ನುಡಿ ಹಬ್ಬದ ಸಂಯೋಜನೆ ನಡೆಸಲಾಗುತ್ತಿದೆ.

RELATED ARTICLES  ಹೊನ್ನಾವರ ಮಾವಿನಕುರ್ವಾ ಶ್ರೀ ನವದುರ್ಗಾ ದೇವರ ಸನ್ನಿಧಿಯಲ್ಲಿ ವರ್ಧಂತಿ ಉತ್ಸವ

ಹಿಂದಿನ ನುಡಿಹಬ್ಬದಲ್ಲಿ ತನು ಮನ ಧನಗಳಿಂದ ಸಹಕರಿಸಿದ ಚಲನಚಿತ್ರ ನಿರ್ಮಾಪಕರು ಹಾಗೂ ಉದ್ಯಮಿ ಸುಬ್ರಾಯ ವಾಳ್ಕೆ, ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟನ ಅಧ್ಯಕ್ಷರು ಮತ್ತು ಬಿಜೇಪಿ ಮುಖಂಡರಾದ ನಾಗರಾಜ ನಾಯಕ ತೊರ್ಕೆಯಂತವರ ಬೆಂಬಲ ಈ ಕಾರ್ಯಕ್ಕೆ ಸಿಗಲಿದೆ ಎಂಬ ನಿರೀಕ್ಷೆ ಇರುವುದಾಗಿ ಕಾರ್ಯಕರ್ತರು ತಿಳಿಸಿದ್ದಾರೆ.