ಕುಮಟಾ : ಹಲವು ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮಗಳ ಮೂಲಕ ಚಿರಪರಿಚಿತವಾಗಿರುವ ಅಖಿಲ ಹವ್ಯಕ ಮಹಾಸಭಾದ ಅಡಿಯಲ್ಲಿ, ಹವ್ಯಕ ಪ್ರತಿಭೆಗಳ ಅನಾವರಣಕ್ಕಾಗಿ ಪ್ರತಿಬಿಂಬ ಕಾರ್ಯಕ್ರಮ ಸಂಘಟಿಸಲಾಗಿದ್ದು. ಫೇ.೧೧ ಭಾನುವಾರದಂದು ತಾಲೂಕಿನ ಕರ್ಕಿಯ  ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಹವ್ಯಕ ವಿದ್ಯಾರ್ಥಿಗಳು ಹಾಗೂ ಸಮಾಜ ಬಂಧುಗಳಿಗಾಗಿ ವಿವಿಧ ಸ್ಪರ್ಧೆ ಹಾಗೂ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ  ಕುಮಟಾದ ಖಾಸಗಿ ಹೊಟೆಲ್ ಒಂದರಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಖಿಲ ಹವ್ಯಕ ಮಹಾಸಭಾದ ನಿರ್ದೇಶಕರುಗಳಾದ ಆರ್.ಜಿ. ಹೆಗಡೆ ಮುಡಾರೆ ಮತ್ತು ಅರುಣ್ ಹೆಗಡೆ ಕುಮಟಾ, ಪ್ರತಿಬಿಂಬ ಕಾರ್ಯಕ್ರಮದ ಸಂಚಾಲಕ ಸತೀಶ ಭಟ್ಟ ಕರ್ಕಿ ಇತರರು ಪ್ರತಿಬಿಂಬದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮದ ವಿವರ ತೆರೆದಿಟ್ಟರು.

ಪ್ರತಿಬಿಂಬ ಸಂಚಾಲಕ ಸತೀಶ ಭಟ್ಟ ಕರ್ಕಿ ಮಾತನಾಡಿ,

ಈ ದಿನ  6 ವರ್ಷದ ಒಳಗಿನವರಿಗೆ ಛದ್ಮ ವೇಷ, ಶ್ಲೋಕ ಪಠಣ, ಚಂಡು ಎಸೆತ. ಏಳರಿಂದ ಹನ್ನೆರಡು ವರ್ಷದವರಿಗೆ ಭಗವದ್ಗೀತೆ 10ನೇ ಅಧ್ಯಾಯದ ಮೊದಲ 15 ಶ್ಲೋಕಗಳು, ಚಿತ್ರಕಲೆ.(ವಿಷಯ – ಹಬ್ಬ), ಕೆರೆ ದಡ. 13 ರಿಂದ 18 ವರ್ಷದವರಿಗೆ ಭಾವಗೀತೆ, ಆಶುಭಾಷಣ, ಸಂಗೀತ ಖುರ್ಚಿ

RELATED ARTICLES  ಚಂದಾವರ ಪೇಸ್ತ್ ಸಂಪನ್ನ : ಮೊಂಬತ್ತಿ ಬೆಳಗಿ ಪ್ರಾರ್ಥನೆ

ಸಾಮಾನ್ಯ ವಿಭಾಗದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಹವಿರುಚಿ,(ಹಲ್ವಾ), ಸಂಪ್ರದಾಯ ಗೀತೆ, ರಂಗೋಲಿ, ಆರತಿ ತಟ್ಟೆ, ಪಾಯಸ ಕುಡಿಯುವುದು. ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆಯಲಿದೆ ಎಂದು ಅವರು ವಿವರಿಸಿದರು. ಫೇ.೬ ಹೆಸರು ನೋಂದಾವಣೆಗೆ ಕೊನೆಯ ದಿನವಾಗಿದ್ದು ಹೆಸರು ನೋಂದಾವಣೆಗೆ 9481052237, 8762958997, 9482558184 ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹವ್ಯಕ ಮಹಾಸಭಾದ ನಿರ್ದೇಶಕ ಅರುಣ ಹೆಗಡೆ ಪ್ರಾಂತ್ಯವಾರು ಪ್ರತಿಬಿಂಬ ಕಾರ್ಯಕ್ರಮ ನಡೆಸಿ, ಭಗವದ್ಗೀತೆ, ಭಾವಗೀತೆ, ರಂಗೋಲಿ, ಸಂಪ್ರದಾಯ ಗೀತೆ, ಮತ್ತು ಪಾಯಸ ಕುಡಿಯುವ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದ ಸ್ಪರ್ಧಿಗಳನ್ನು ಬೆಂಗಳೂರಿನಲ್ಲಿ ನಡೆಯುವ ಪ್ರತಿಬಿಂಬ ಮೆಗಾ ಫೈನಲ್ ಗೆ ಆಯ್ಕೆ ಮಾಡಲಾಗುವುದು ಎಂದರು.

ಅಂದು ಬೆಳಗ್ಗೆ 9:30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ವೇ.ಮೂ ಕೃಷ್ಣಾನಂದ ಭಟ್ಟ ಬಲ್ಸೆ ಕಾರ್ಯಕ್ರಮವು ಉದ್ಘಾಟಿಸುವರು. ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರು ಅಧ್ಯಕ್ಷತೆ ವಹಿಸುವರು. ಚೆನ್ನಕೇಶವ ಪ್ರೌಢಶಾಲೆಯ ಅಧ್ಯಕ್ಷ ಗಜಾನನ ಹೆಗಡೆ, ಮುಖ್ಯೋಪಾಧ್ಯಾಯ ಎಲ್.ಎಂ ಹೆಗಡೆ ಉಪಸ್ಥಿತರಿರುವರು. 

RELATED ARTICLES  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಆಯ್ಕೆ

ಮಧ್ಯಾಹ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿರಸಿಯ ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಅನಿತಾ ಭಟ್ಟ ಇವರಿಂದ ವಿಶೇಷ ಉಪನ್ಯಾಸ ನಡೆಯಲಿದ್ದು, ಸಮಾರೋಪ ಸಮಾರಂಭದಲ್ಲಿ ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರು ಅಧ್ಯಕ್ಷತೆ ವಹಿಸುವರು. ಅಭ್ಯಾಗತರಾಗಿ ಕರಿಕಾನ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ ಸುಬ್ರಹ್ಮಣ್ಯ ಭಟ್ಟ, ಕೆಡಿಸಿಸಿ ಬ್ಯಾಂಕ್ ಶಿರಸಿಯ ನಿವೃತ್ತ ಎಂ.ಡಿ ರಾಮಚಂದ್ರ ಜೋಶಿ ಕರ್ಕಿ, ಕೆನರಾ ಫುಡ್ ಪ್ರಾಡಕ್ಟ್ಸ್ ಮಾಲೀಕ ಎನ್.ಎಸ್ ಹೆಗಡೆ ಇರಲಿದ್ದು, ಸಾಧಕರಿಗೆ ಸನ್ಮಾನ ಹಾಗೂ ಬಹುಮಾನ ವಿತರಣೆ ನಡೆಯಲಿದೆ  ಎಂದು  ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪ್ರತಿಬಿಂಬ ಕಾರ್ಯಕ್ರಮದ ಪದಾಧಿಕಾರಿಗಳಾದ ಈಶ್ವರ ಭಟ್ಟ, ಎಸ್ .ಎನ್. ಹೆಗಡೆ, ನಿರ್ಮಲ ಹೆಗಡೆ ಮತ್ತಿತರರು ಇದ್ದರು.