ಶಿರಸಿ: ವಿಶೇಷ ಕಾರ್ಯಕ್ರಮಗಳಿಗೆ ಶಾಮಿಯಾನ ವ್ಯವಸ್ಥೆ ಬರುವುದರಕ್ಕಿಂತ ಮುಂಚೆಯಿಂದಲೇ ಸೋಗೆ, ತೆಂಗಿನ ಗರಿಗಳ ಚಪ್ಪರ ನಿರ್ಮಾಣಗಳಲ್ಲಿ ಸಿದ್ಧಹಸ್ತರಾಗಿದ್ದ, ತಾಲೂಕಿನ ಗುಂಡಿಗದ್ದೆಯ ಸುಬ್ರಾಯ ರಾಮಕೃಷ್ಣಹೆಗಡೆ (92) ಜ .30ರಂದು ನಿಧನರಾದರು. ಇವರು ಪ್ರಗತಿಪರ ಕೃಷಿಕರಾಗಿದ್ದರಲ್ಲದೇ 1991ರಲ್ಲಿ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾರೋಹಣದ ಸಂದರ್ಭದಲ್ಲಿನ ಬೃಹತ್ ಚಪ್ಪರ ಎಲ್ಲರ ಗಮನ ಸೆಳೆದಿತ್ತು. ಮೃತರು ಪತ್ನಿ, 7 ಪುತ್ರಿಯರು, ಓರ್ವ ಪುತ್ರರನ್ನು ಅಗಲಿದ್ದಾರೆ.

RELATED ARTICLES  ಸಂಸದ ಕಾಗೇರಿಯವರ ಮನೆ ಸಮೀಪ ಚಿರತೆ ಪ್ರತ್ಯಕ್ಷ.