ಮುಂಬೈ : ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಸಾವನ್ನಪ್ಪಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು. ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನನ್ನಪ್ಪಿದ್ದಾರೆ ಎಂದು ಅವರ ಮ್ಯಾನೇಜರ್‌ ಖಚಿತಪಡಿಸಿದ್ದಾರೆ. ಪೂನಮ್‌ ಪಾಂಡೆ ಅವರ ಮ್ಯಾನೇಜರ್‌ ಹಾಗೂ ಅವರ ಟೀಮ್‌ ಈ ಕುರಿತಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ಅಧಿಕೃತವಾಗಿ ಪೋಸ್ಟ್‌ ಮಾಡಿದ್ದಾರೆ.

ಇಂದಿನ ಬೆಳಗ್ಗೆ ನಮಗೆಲ್ಲರಿಗೂ ಕಠಿಣ ದಿನವಾಗಿತ್ತು. ಗರ್ಭಕಂಠದ ಕ್ಯಾನ್ಸರ್‌ನ ಕಾರಣದಿಂದಾಗಿ ಇಂದು ನಾವು ಪೂನಮ್‌ ಅವರನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಲು ದುಃಖವಾಗುತ್ತಿದೆ. ಈ ದುಃಖದ ಸಮಯದಲ್ಲಿ ನಾವು ನಮ್ಮ ಖಾಸಗಿತನಕ್ಕಾಗಿ ವಿನಂತಿ ಮಾಡುತ್ತಿದ್ದೇವೆ. ಆಕೆಯೊಂದಿಗೆ ಹಂಚಿಕೊಂಡ ಎಲ್ಲಾ ಕ್ಷಣಗಳನ್ನು ನಾವು ನೆನಪಿಸಿಕೊಳ್ಳುತ್ತಿದ್ದೇವೆ’ ಎಂದು ಬರೆದುಕೊಂಡಿದೆ.

RELATED ARTICLES  ಶಾಲೆಗೆ ಫೀ ಕಟ್ಟಿಲ್ಲವೆಂದು ಮಕ್ಕಳನ್ನು ನೆಲ ಮಾಳಿಗೆಯಲ್ಲಿ ಕೂಡಿಟ್ಟರು!

ಪೂನಂ ಪಾಂಡೆ ಕೊನೆಯದಾಗಿ ಎರಡು ದಿನಗಳ ಹಿಂದೆ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಈಗ ಆ ವಿಡಿಯೋ ವೈರಲ್ ಆಗಿದೆ. ಮುಂಬೈನ ಮೀಡಿಯಾ ಏಜೆನ್ಸಿ ಮಾಲೀಕರಾಗಿರುವ ಪರಿಮಳ್ ಮೆಹ್ತಾ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

RELATED ARTICLES  ಮಾಧ್ಯಮಗಳನ್ನು ಧಮನಿಸುತ್ತಿರುವುದು ಖಂಡನೀಯ:ಅಖಿಲ ಹವ್ಯಕ ಮಹಾಸಭೆ.

ಪರಿಮಳ್‌ ಮೆಹ್ತಾ ಅವರ ಹುಟ್ಟುಹಬ್ಬ ಕಾರ್ಯಕ್ರಮ ಗೋವಾದಲ್ಲಿ ನಡೆದಿತ್ತು. ಅದಕ್ಕೆ ಹೋಗಿರುವ ಪೂನಂ ಪಾಂಡೆ, ಅಲ್ಲಿ ಬಹಳ ಲವಲವಿಕೆಯೊಂದಿಗೆ ವಿಡಿಯೋಗೂ ಪೋಸ್ ನೀಡಿದ್ದರು. ಆ ವಿಡಿಯೋದಲ್ಲಿ ಪೂನಂ ಪಾಂಡೆ ಅವರಿಗೆ ಅನಾರೋಗ್ಯ ಇರುವಂತಹ ಯಾವ ಲಕ್ಷಣವೂ ಗೋಚರಿಸಿಲ್ಲ.