ಗೋಕರ್ಣ : ಇಲ್ಲಿನ ಕರಿಯಪ್ಟ ಕಟ್ಟೆ ಬೀಚ್ ಹತ್ತಿರ ಈಜಲು ಹೋಗಿ ಮುಳುಗುತ್ತಿದ್ದ ಪ್ರವಾಸಿಗರನ್ನು ರಕ್ಷಿಸಿದ ಘಟನೆ ಇಂದು ಬೆಳಿಗ್ಗೆ 9.30ರ ಸುಮಾರಿಗೆ ನಡೆದಿದೆ. ದಾವಣಗೆರೆ ಮೂಲದವರು ಸಮುದ್ರದಲ್ಲಿ ಆಟವಾಡಲು ಇಳಿದಿದ್ದರು. ಅಲೆಗಳ ಹೊಡೆತಕ್ಕೆ ಸಿಲುಕಿ ದಡಕ್ಕೆ ಬರಲಾಗದೆ ಮುಳುಗುವ ಸ್ಥಿತಿಯಲ್ಲಿದ್ದರು. ಈ ವೇಳೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಅಲ್ಲೇ ಸಮೀಪ ಇದ್ದ ಲೈಫ್‌ಗಾರ್ಡ್ ಕೂಡಲೇ ಸಮುದ್ರಕ್ಕೆ ಜಿಗಿದು ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ. ಕರ್ತವ್ಯ ನಿರತ ಲೈಫ್‌ಗಾರ್ಡ್ಗಳಾದ ಸಂದೇಶ್‌ ಹರಿಕಂತ್ರ,‌ ಲೋಹಿತ್ ಹರಿಕಾಂತ್, ವಿಕ್ರಮ್ ಹರಿಕಂತ್ರ, ಸಚಿನ್ ಹರಿಕಂತ್ರ ರಕ್ಷಣೆ ಮಾಡಿದವರು.

RELATED ARTICLES  ಗಾಂಜಾ ಸಮೇತ ಆರೋಪಿ ಅರೆಸ್ಟ್..!