ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಉದ್ಯೋಗ ಸೃಷ್ಟಿಗಾಗಿ ಆಗ್ರಹಿಸಿ ಕುಮಟಾದಿಂದ ಪಾದಯಾತ್ರೆ ಆರಂಭವಾಗಿದ್ದು. ಪಟ್ಟಣದ ಮಾಸ್ತಿಕಟ್ಟೆ ದೇವಾಲಯದಿಂದ ಇಂದು ಮುಂಜಾನೆ ಪಾದಯಾತ್ರೆ ಪ್ರಾರಂಭಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಅನಂತಮೂರ್ತಿ ಹೆಗಡೆ ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯತೆ ಇದ್ದು, ಈ ಹಿಂದಿನ ಸರಕಾರ ಜಾಗವನ್ನು ಗುರುತಿಸಿತ್ತು. ಸಿದ್ದರಾಮಯ್ಯ ಸರ್ಕಾರ ಆ ಬಗ್ಗೆ ತಕ್ಷಣದಲ್ಲಿ ಹಣ ಮಂಜೂರು ಮಾಡಬೇಕು. ಒಂದು ವೇಳೆ ಹಣ ಬಿಡುಗಡೆ ಮಾಡದೇ ಇದ್ದರೆ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಕಚೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಘೋಷಿಸಿದರು.

ನಮ್ಮ ಜಿಲ್ಲೆಯಲ್ಲಿ ಗಟ್ಟದ ಮೇಲೊಂದು ಗಟ್ಟದ ಕೆಳಗೊಂದು ಆದಷ್ಟು ಶೀಘ್ರವಾಗಿ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್ ನಿರ್ಮಾಣವಾಗಬೇಕು. ಕುಮಟಾದಲ್ಲಿ ಈ ಹಿಂದೆಯೇ ಆಸ್ಪತ್ರೆಗೆ ಸ್ಥಳ ನಿಗದಿಯಾಗಿತ್ತು, ಆದರೆ ಯಾಕಿನ್ನೂ ಆಸ್ಪತ್ರೆ ನಿರ್ಮಾಣ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು. ಜನರು ನಿಮಗೇನು ತೊಂದರೆ ಮಾಡಿದ್ದಾರೆ? ನಾವು ಏನು ಶಾಪವನ್ನು ಹೊಂದಿದ್ದೇವೆ? ಯಾಕೆ ಅಸಡ್ಡೆ ಮಾಡುತ್ತಿದ್ದೀರಿ? ಎಂದು ಸರಕಾರವನ್ನು ಕುಟುಕಿದರು.

ಬೇಡದ ಯೋಜನೆಗಳಿಗೆ 100 ಕೋಟಿ 200 ಕೋಟಿಯನ್ನು ಕೊಡುತ್ತಿದ್ದೀರಿ. ಜನರ ಜೀವ ಉಳಿಸುವ ಆಸ್ಪತ್ರೆ ನಿರ್ಮಾಣಕ್ಕೆ 300 ಕೋಟಿ ನೀಡಲು ಸಾಧ್ಯವಿಲ್ಲವೇ? ಎಂದರು. ನಮ್ಮಲ್ಲಿ ನ್ಯುರೋ ಸರ್ಜನ್ ಯಾರು ಇಲ್ಲ ಇದನ್ನು ಹೇಳಿಕೊಳ್ಳಲು ನಮಗೆ ಅವಮಾನವಾಗುತ್ತಿದೆ. ಯಾವುದೇ ಅನಾರೋಗ್ಯ ಉಂಟಾದರೂ ನಾವು ಹೊರ ಜಿಲ್ಲೆಯನ್ನು ಅವಲಂಬಿಸಬೇಕು. ಬೇರೆಡೆಗೆ ಹೋಗಿ ಭಿಕ್ಷೆ ಬೇಡುವ ಸ್ಥಿತಿ ಇದೆ. ನಮ್ಮ ಜಿಲ್ಲೆಗೆ ಅವಮಾನ ಬೇಕಾ ಎಂದು? ಪ್ರಶ್ನಿಸಿದ ಅವರು ಸ್ವಾಭಿಮಾನಿ ಯುವಕರು ನಮ್ಮೊಂದಿಗೆ ಹೋರಾಟಕ್ಕೆ ಬಂದಿದ್ದಾರೆ ಎಂದರು.

RELATED ARTICLES  ಬಾಡದ ಶ್ರೀ ಕಾಂಚಿಕಾಂಬಾ ದೇವಾಲಯಕ್ಕೆ ಆರ್.ವಿ ದೇಶಪಾಂಡೆ ಭೇಟಿ.

ಕುಮಟಾದಲ್ಲಿ ಈ ಹಿಂದೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ನಿಗದಿಯಾಗಿದ್ದ ಸ್ಥಳದಲ್ಲಿ ಭೂಮಿ ಪೂಜೆ ನೆರವೇರಿಸಿ, ಫೇ ೫ ರಂದು ಪಾದಯಾತ್ರೆ ಪ್ರಾರಂಭಿಸುತ್ತೇವೆ. ಮೂರು ದಿನದಲ್ಲಿ ಭಟ್ಕಳವನ್ನು ತಲುಪಿ, ಮಂಕಾಳ ವೈದ್ಯರಿಗೆ ಮನವಿ ನೀಡಲಿದ್ದೇವೆ ಎಂದರು.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಜೊತೆಗೆ, ಮಹಿಳೆಯರಿಗೆ ಉದ್ಯೋಗ ನೀಡುವಂತೆ ಕೈಗಾರಿಕಾ ವಲಯ ಸ್ಥಾಪನೆಗೆ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದ ಅವರು, ಎಲ್ಲಡಿಯಲ್ಲಿಯೂ ಗಾರ್ಮೆಂಟ್ಸ್ ಫ್ಯಾಕ್ಟರಿಗಳನ್ನು ಸ್ಥಾಪಿಸಬೇಕು. ಸರಕಾರವೇ 15 ರಿಂದ 20 ಎಕರೆಯನ್ನು ಗುರುತಿಸಿ. ಉದ್ದಿಮೆದಾರರಿಗೆ ಅವುಗಳನ್ನು ನೀಡುವುದರ ಮೂಲಕ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಹಿರೇಗುತ್ತಿಯಲ್ಲಿ 1800 ಎಕರೆ ಸರಕಾರದ ವಶದಲ್ಲಿರುವ ಜಾಗ ಇದೆ. ಅದನ್ನು ಏನೂ ಬಳಕೆ ಮಾಡಿಲ್ಲ. ಇಲ್ಲಿಯ ಯುವಕರು ಬೆಂಗಳೂರು ಪುಣೆ ಮುಂಬೈ ಹೀಗೆ ಬೇರೆ ಬೇರೆ ಸ್ಥಳಗಳಿಗೆ ಉದ್ಯೋಗವನ್ನು ಆರಿಸಿ ಹೋಗುತ್ತಿದ್ದಾರೆ. ಅದರ ಬದಲು ಹಿರೇಗುತ್ತಿಯ ಈ ಜಾಗದಲ್ಲಿಯೇ 500 ಎಕರೆಯನ್ನು ಸಾಫ್ಟ್ವೇರ್ ಪಾರ್ಕ್ ಎಂದು ಘೋಷಣೆ ಮಾಡಿ, 300 ಎಕರೆಯನ್ನು ಗಾರ್ಮೆಂಟ್ಸ್ ಹಬ್ಬ್ ಮಾಡಬೇಕು. ಇನ್ನು ಕೆಲ ಜಾಗದಲ್ಲಿ ಮೆಕ್ಯಾನಿಕಲ್ ಇನ್ನಿತರ ಕಾರ್ಖಾನೆಗಳಿಗೆ ಅವಕಾಶ ಮಾಡಿಕೊಡಿ ಎಂದರು. ಮಾತುಮಾತಿಗೆ ನಮ್ಮ ಜಿಲ್ಲೆಯಲ್ಲಿ ಜಾಗ ಇಲ್ಲ ಎಂದು ಹೇಳಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಸಾಕಷ್ಟು ಜಾಗವಿದ್ದು, ಒಂದು ಎಕರೆ ಜಾಗದಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿ ನಿರ್ಮಾಣ ಮಾಡಿದರೆ 300 ಜನರಿಗೆ ಉದ್ಯೋಗ ಕೊಡಬಹುದು. ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿ ಎಂದರು.

RELATED ARTICLES  ಸಿಇಟಿ ವಿದ್ಯಾರ್ಥಿಗಳಿಗಾದ ಅನ್ಯಾಯ ಸರಿಪಡಿಸಲಿ : ಎಂ.ಜಿ ಭಟ್ಟ

ಶಾಸಕ ದಿನಕರ ಶೆಟ್ಟಿ ಮಾತನಾಡಿ ಈ ಹಿಂದೆಯೂ ನಾನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಧ್ವನಿ ಎತ್ತಿದೇನೆ. ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದೆಯೆಂದರು. ಶಿವಾನಂದ ಹೆಗಡೆ ಮಾತನಾಡಿ, ಅನಂತಮೂರ್ತಿ ಹೆಗಡೆಯವರು ಅತ್ಯುತ್ತಮ ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ ಇವರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು. ವಕೀಲ ಆರ್.ಜಿ ನಾಯ್ಕ ಮಾತನಾಡಿ ಶಾಸಕರೆಲ್ಲರೂ ಒಂದಾಗಿ ಈ ಬಗ್ಗೆ ಧ್ವನಿ ಎತ್ತಬೇಕು ಶಾಸಕ ದಿನಕರ ಶೆಟ್ಟಿಯವರ ಜೊತೆಗೆ ಯುವ ಸಮುದಾಯ ಇದು ಸದನದಲ್ಲಿ ಗುಡುಗುವಂತೆ ಕರೆ ನೀಡಿದರು.