ಕುಮಟಾ : ತಾಲೂಕಿನ ಹೊಳೆಗದ್ದೆಯ ಶ್ರೀ ಶಾಂತಿಕಾಂಬಾ ಸಭಾಭವನದಲ್ಲಿ 12ನೇ ವರ್ಷದ ಜಿ.ಎಸ್.ಬಿ ಸೇವಾ ಟ್ರಸ್ಟ್ ಹೊಳೆಗದ್ದೆ ಇದರ ಶಿಷ್ಯವೇತನ, ವೈದ್ಯಕೀಯ ಸಹಾಯಧನ, ಗೌರವಧನ, ಮಾಸಿಕ ವೇತನ ಮತ್ತು ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
ಗೋವಾದ ಪ್ರಸಿದ್ಧ ಉದ್ದಿಮೆದಾರ ದೇವಿದಾಸ ಹನುಮಂತ ನಾಯಕ, ದೀಪ ಪ್ರಜ್ವಲನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಸಾರಸ್ವತ ಸಮಾಜದ ಸಂಸ್ಕಾರಯುತ ಕಾರ್ಯಕ್ರಮ ಎಂದು ಬಣ್ಣಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿವಾನಿ ಶಾಂತರಾಮ ಭಟ್ಕಳ ಇಬರು ಮೊಬೈಲ್ ನ ದುಷ್ಪರಿಣಾಮಗಳ ಕುರಿತು ಮಾತನಾಡುತ್ತಾ, ಬಾಲ್ಯದಲ್ಲಿ ಕಷ್ಟ ಅನುಭವಿಸಿದರೆ ಭವಿಷ್ಯದಲ್ಲಿ ಸುಖವನ್ನು ಪಡೆಯಬಹುದು ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿಗಳಾದ ಜಿಲ್ಲಾ ಕಾರಾಗೃಹ ಕಾರವಾರದ ರಾಘವೇಂದ್ರ ಶಂಕರ ಶಾನಭಾಗ ಇವರು ಮಾತನಾಡಿ ನೈಜ ನಿದರ್ಶನಗಳ ಮೂಲಕ ಇಂದಿನ ಸಮಾಜದ ಸ್ಥಿತಿಯನ್ನು ಎಳೆ ಎಳೆಯಾಗಿ ವಿವರಿಸಿದರು. ಗ್ರಾಮೀಣ ಪ್ರದೇಶದ ಮನೆಗಳು ವೃದ್ಧಾಶ್ರಮಗಳಾಗಿ ಬದಲಾಗುತ್ತಿರುವುದರ ಕುರಿತು ವಿಷಾದ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಉದ್ಯಮಿ ಮುರುಳಿಧರ ಯಶವಂತ ಪ್ರಭು, ಗೋಪಿನಾಥ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ದಯಾನಂದ ಹನುಮಂತ ಶಾನಭಾಗ ಇವರು ಉಪಸ್ಥಿತರಿದ್ದರು. ಮೋಹನ ಗಣಪತಿ ಕಾಮತ ಹೊಳೆಗದ್ದೆ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ 37 ವಿದ್ಯಾರ್ಥಿಗಳಿಗೆ ಶಿಷ್ಯವೇತನದ ಜೊತೆಗೆ ಪ್ರೋತ್ಸಾಹದ ನೀಡಿ ಪುರಸ್ಕರಿಸಲಾಯಿತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಹೊಳೆಗದ್ದೆಯ 21 ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. 2023-24ನೇ ವರ್ಷದಲ್ಲಿ ಟ್ರಸ್ಟ್ ವತಿಯಿಂದ ಒಟ್ಟು 90,000 ರೂ. ಶಿಷ್ಯವೇತನ ವಿತರಿಸಲಾಯಿತು. ಗಜಾನನ ಶಾನಭಾಗ ಧಾರೇಶ್ವರ ಕಾರ್ಯಕ್ರಮ ನಿರೂಪಿಸಿದರು. ಪ್ರೀತೇಶ ಶಾನಭಾಗ ಪ್ರಾರ್ಥನೆಯ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಣೇಶ ಪೈ ಹೊಳೆಗದ್ದೆ ಸ್ವಾಗತಿಸಿದರು. ಸುಬ್ರಾಯ ಶಾನಭಾಗ ವರದಿ ವಾಚಿಸಿದರು. ದೀಪಕ್ ಕಾಮತ ಹೊಳೆಗದ್ದೆ ಶಿಷ್ಯ ವೇತನ ಯಾದಿ ಪ್ರಕಟಿಸಿದರು. ಅನಂತ್ ಕಾಮತ ವಂದಿಸಿದರು.
ಕಾರ್ಯಕ್ರಮದಲ್ಲಿ ದತ್ತಾತ್ರೇಯ ಜಿ. ಪಂಡಿತ , ಅರವಿಂದ ಪೈ, ರಾಜೀವ ಕಾಮತ, ವಾಮನ ಕಾಮತ, ಪ್ರಮೋದ ಪ್ರಭು, ಕಾಶಿನಾಥ ಬಾಳಗಿ, ಆನಂದ್ ಶಾನಭಾಗ, ನಾಗರಾಜ ಪೈ, ಧನಂಜಯ್ ಪೈ, ಮರ್ತಪ್ಪ ಪೈ, ಬಾಬಣ್ಣ ಪೈ, ನೀಲಕಂಠ ಪೈ, ಗೋವಿಂದರಾಯ ಶಾನಭಾಗ ಉಪಸ್ಥಿತರಿದ್ದರು.