ಕುಮಟಾ: ‘ಸ್ವ-ನಿಧಿ ಸೇ ಸಮೃದ್ಧಿ’ ಉತ್ಸವ ಘಟಕದಡಿ ಆಯೋಜಿಸಿದ ಕಾರ್ಯಕ್ರಮದಡಿ ೬೦೦ ರಷ್ಟು ಬೀದಿ ಬದಿ ವ್ಯಾಪಾರಸ್ಥರು ಹಾಗೂ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಫಲಾನುಭವಿಗಳು ಹಾಜರಿದ್ದು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ವಿವಿಧ ಯೋಜನೆಗಳ ಮಾಹಿತಿ ನೀಡಲಾಗಿದೆ ಎಂದು ಪುರಸಭಾ ಕಾರ್ಯಾಲಯದಲ್ಲಿ ಜರುಗಿದ ಪಟ್ಟಣ ಮಾರಾಟ ಸಮಿತಿ ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿವರಣೆ ಒದಗಿಸಿದರು. 

ಆರೋಗ್ಯ ಇಲಾಖೆಯಿಂದ ಸುಮಾರು ೧೦೦ ರಷ್ಟು ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡುಗಳ ನೋಂದಣಿ ಮಾಡಲಾಗಿದೆಯಲ್ಲದೇ ಅಸಾಂಕ್ರಾಮಿಕ ರೋಗಗಳ ಕುರಿತು ತಪಾಸಣೆ ನಡೆಸಲಾಯಿತು ಎಂಬ ಬಗ್ಗೆ ಸಭೆಗೆ ಮಾಹಿತಿಯನ್ನು ಹಿರಿಯ ಆರೋಗ್ಯ ತಪಾಸಣಾಧಿಕಾರಿ ವೀಣಾ ಎಂ. ಎಚ್. ನೀಡಿದರು.  

RELATED ARTICLES  ಮಂಗನ ಕಾಯಿಲೆಗೆ ಇನ್ನೆರಡು ಬಲಿ.

ಈಗಾಗಲೇ ನೋಂದಣಿಯಾಗಿ ಗುರುತಿನ ಕಾರ್ಡ್ ನೀಡಿದ ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತಿನ ಕಾರ್ಡ್ ನವೀಕರಣ ಹಾಗೂ ಹೊಸದಾಗಿ ಗುರುತಿಸಿದವರಿಗೆ ಗುರುತಿನ ಕಾರ್ಡ್ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಹಾಗೂ ಯುವನಿಧಿಯೋಜನೆಯ ಕುರಿತು ಸುದೀರ್ಘ ಮಾಹಿತಿಯನ್ನು ಮೀನಾಕ್ಷಿ ಆಚಾರಿ ನೀಡಿದರು. 

RELATED ARTICLES  ಬಹುಬಗೆಯ ಆರಾಧನೆಯೊಂದಿಗೆ ದೊಡ್ಡಬ್ಬ ಸಂಪನ್ನ.

ಸಭೆಯಲ್ಲಿ ಉಪಸ್ಥಿತರಿದ್ದ ಪಟ್ಟಣ ಮಾರಾಟ ಸಮಿತಿ ಸದಸ್ಯ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಎನ್. ಆರ್. ಗಜು ಸರ್ಕಾರಿ ಯೋಜನೆಯ ಸಂಪೂರ್ಣ ಅನುಷ್ಠಾನಕ್ಕೆ ತರುವಲ್ಲಿ ಪುರಸಭಾ ಕಾರ್ಯಾಲಯ ಏರ್ಪಡಿಸುವ ಕಾರ್ಯಕ್ರಮಗಳು ಉಪಯುಕ್ತವಾಗಿದ್ದು,  ಸರ್ಕಾರದ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳುವಂತೆ ತಿಳುವಳಿಕೆ ನೀಡಿದರು. ಸಭೆಯಲ್ಲಿ ಪಟ್ಟಣ ಮಾರುಕಟ್ಟೆ ಸಮಿತಿಯ ಸರ್ಕಾರಿ ಅಧಿಕಾರಿಗಳು, ಸರ್ಕಾರೇತರ ಸಂಘ ಸಂಸ್ಥೆಗಳ ಮುಖ್ಯಸ್ಥರು, ಬೀದಿ ವ್ಯಾಪಾರಸ್ಥರ ಸಂಘದ ಪ್ರತಿನಿಧಿಗಳು ಹಾಜರಿದ್ದು ಚರ್ಚೆಯಲ್ಲಿ ಪಾಲ್ಗೊಂಡರು.