ಕುಮಟಾ : ತಾಲೂಕಿನ ಹೆಗಡೆ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಶಾಂತಿಕಾಂಬಾ ದೇವಿಯ ರಥೋತ್ಸವ ಇಂದು ನಡೆಯಲಿದೆ. ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತರು ಸರದಿಯಲ್ಲಿ ನಿಂತು ತುಲಾಭಾರ, ಹರಕೆ ಸೇರಿದಂತೆ ಇಷ್ಟಾರ್ಥ ಸಿದ್ದಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ. 

ಊರಿನ ಹಾಗೂ ಪರ ಊರಿನ ಸಹಸ್ರಾರು ಭಕ್ತರು, ಜಾತ್ರೆ ಸಂದರ್ಭದಲ್ಲಿ ದೇವಾಲಯಕ್ಕೆ ಬಂದು ತಾವು ಹೊತ್ತಿರುವ ಹರಕೆಗಳನ್ನು ತೀರಿಸುವುದು ಸಾಮಾನ್ಯವಾಗಿದೆ. ದೇವಾಲಯದ ಆವಾರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ತಾಯಿಗೆ ಪೂಜಾದಿ ಕೈಂಕರ್ಯಗಳ ರಸೀದಿ, ವಿವಿಧ ಸೇವಾ ರಸೀದಿಗೆ ಕೌಂಟರ್ ತೆರೆಯಲಾಗಿದೆ. 

RELATED ARTICLES  ಎಲ್ಲರಿಗಿಂತ ಮೊದಲೇ ನೀವು SSLC ರಿಸಲ್ಟ ನೋಡಬೇಕಾ? ಹಾಗಾದರೆ ಹೀಗೆ ಮಾಡಿ.

ಈಗಾಗಲೇ ಜಾತ್ರೆಯ ವಿಧಿ ವಿಧಾನಗಳು ಪ್ರಾರಂಭಗೊಂಡಿದ್ದು, ದೇವಿ ಪಲ್ಲಕ್ಕಿಯಲ್ಲಿ ವಿರಾಜಮಾನಾಗಿ ಗ್ರಾಮದಾದ್ಯಂತ ಸಂಚರಿಸಿ ಭಕ್ತ ಜನರನ್ನು ಹರಸುತ್ತಿದ್ದಾಳೆ. ಬುಧವಾರ ರಥಾರೂಡೆಯಾಗಿರುವ ತಾಯಿ ಶ್ರೀ ಶಾಂತಿಕಾಂಬೆಯ ರಥೋತ್ಸವ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ಸಮಸ್ತ ಭಕ್ತಜನತೆ ಹಾಜರಿರುವಂತೆ ವೈವಾಟಿ ಮೊಕ್ತೆಸರರು ಹಾಗೂ ಆಡಳಿತ ಮಂಡಳಿಯವರು ವಿನಂತಿಸಿಕೊಂಡಿದ್ದಾರೆ.

RELATED ARTICLES  ಆಶ್ರಮ ಎಂದರೆ ಆಧ್ಯಾತ್ಮಿಕ ಆಶ್ರಯ ಸ್ಥಳ : ನಿಶ್ಚಲಾನಂದನಾಥ ಸ್ವಾಮೀಜಿ