ಕುಮಟಾ : ಲಯನ್ಸ್ ಕ್ಲಬ್ ಕುಮಟಾ ಅತ್ಯುತ್ತಮ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಸಮಾಜಕ್ಕೆ ಬಹುಪಯುಕ್ತವಾದ ಆರೋಗ್ಯ ಸಂಬಂಧಿಸಿದ ಕಾರ್ಯಕ್ರಮ ಹಮ್ಮಿಕೊಂಡು ಅರ್ಥಪೂರ್ಣವಾಗಿ ಈ ಕಾರ್ಯಕ್ರಮವನ್ನು ರೂಪಿಸಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಲಯನ್ಸ್ ಸೇವಾ ಭವನದಲ್ಲಿ ನಡೆದ ಅನುಭವಿ ಮಾನಸಿಕ ರೋಗ ತಜ್ಞರಾದ ಡಾ. ಕೆ.ಆರ್ ಶ್ರೀಧರ ಶಿವಮೊಗ್ಗ ಇವರಿಗೆ ಲಯನ್ಸ್ ಕ್ಲಬ್ ಕುಮಟಾ ಹಾಗೂ ಊರನಾಗರಿಕರಿಂದ ಸನ್ಮಾನ ಕಾರ್ಯಕ್ರಮ ಹಾಗೂ ೭೨ ನೇ ಉಚಿತ ಗ್ರಾಮೀಣ ಮಾನಸಿಕ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನನ್ನ ಕ್ಷೇತ್ರದಲ್ಲಿ ನಾನು ಆರೋಗ್ಯ ಸಂಬಂಧಿ ಅನೇಕ ಕಾರ್ಯಗಳಿಗೆ ಮಹತ್ವ ನೀಡುತ್ತಾ ಬಂದಿದ್ದು, ಶಿಕ್ಷಣ ಹಾಗೂ ಆರೋಗ್ಯಕ್ಕೆ ಮಹತ್ವ ನೀಡುವುದರಿಂದ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ ಎಂಬುದನ್ನು ನಂಬಿಕೊಂಡಿದ್ದೇನೆ. ಲಯನ್ಸ್ ಕ್ಲಬ್ ಇಂತಹ ಕಾರ್ಯಗಳಲ್ಲಿ ತೊಡಗಿಕೊಂಡು ಸಮಾಜಕ್ಕೆ ಹೊಸ ದಾರಿ ತೋರುತ್ತದೆ ಎಂದರು.
ಲಯನ್ಸ್ ಕ್ಲಬ್ ಕುಮಟಾ ಹಾಗೂ ಶ್ರೀ ರಾಮ ಮೆಡಿಕಲ್ಸ್ ಇವರ ಆಶ್ರಯದಲ್ಲಿ ಕ್ಷೇಮಾ ಟ್ರಸ್ಟ್ ಶಿವಮೊಗ್ಗ ಇವರ ಸಹಯೊಗದೊಂದಿಗೆ ದಿವಂಗತ ಗೋವಿಂದರಾಯ ರಾಮಚಂದ್ರ ನಾಯಕ ಇವರ ಸ್ಮರಣಾರ್ಥ ಮೂಡ್ಲಗಿರಿ ಗೋವಿಂದರಾಯ ನಾಯಕ ಹಾಗೂ ಶ್ರೀಮತಿ ಅಕ್ಷತಾ ಗೋವಿಂದರಾಯ ನಾಯಕ ಇವರ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.
ಅನುಭವಿ ಮಾನಸಿಕ ರೋಗ ತಜ್ಞರಾದ ಡಾ. ಕೆ.ಆರ್ ಶ್ರೀಧರ ಶಿವಮೊಗ್ಗ ಇವರಿಗೆ ಲಯನ್ಸ್ ಕ್ಲಬ್ ಕುಮಟಾ ಹಾಗೂ ಊರನಾಗರಿಕರಿಂದ ಸನ್ಮಾನ ಮಾಡಲಾಯಿತು. ಪ್ರಾರಂಭದಲ್ಲಿ ರಕ್ಷಾ ರಾಧಾಕೃಷ್ಣ ಶಾನಭಾಗ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಲಯನ್ಸ್ ಕ್ಲಬಿನ ಅಧ್ಯಕ್ಷ ಎಂ.ಜೆ.ಎಫ್ ಲಾಯನ್ ದಾಮೋದರ ವಿ.ಭಟ್ಟ ಬಂದ ಅತಿಥಿಗಳನ್ನು ಸ್ವಾಗತಿಸಿದರು. ಮಾನಸಿಕ ಆರೋಗ್ಯ ತಪಾಸಣಾ ಶಿಬಿರ ಚೇರಮನ್ನರಾದ ಲಾಯನ್ ಡಾ. ಜಿ.ಜಿ.ಹೆಗಡೆ. ಪ್ರಾಸ್ತಾವಿಕವಾಗಿ ಮಾತನಾಡಿ ಬಂದ ಅತಿಥಿಗಳನ್ನು ಪರಿಚಯ ಮಾಡಿದರು ಮುಖ್ಯ ಅಥಿತಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಲಯನ್ಸ್ ಕಾರ್ಯದರ್ಶಿ ಎಂ.ಕೆ.ಶಾನಭಾಗ ಸನ್ಮಾನಪತ್ರ ವಾಚಿಸಿದರು. ಪ್ರಮೋದ ಟಿ.ಎಸ್ ಫಾಯ್ದೆ ಹಾಗೂ ಮೂಡ್ಲಗಿರಿ ಗೋವಿಂದರಾಯ ನಾಯಕ ಹಾಗೂ ಜೋನ್ ಚೇರ್ಮನ್ ವಿನಯಾ ಎಸ್ ಹೆಗಡೆ ಶುಭ ಹಾರೈಸಿದರು.
ಡಾ. ಕೆ.ಆರ್ ಶ್ರೀಧರ ಮಾತನಾಡಿ ಲಯನ್ಸ್ ಕ್ಮಬ್, ಮೆ. ಶ್ರೀ ರಾಮ ಮೆಡಿಕಲ್ಸ್ ಇವರು ತಮ್ಮನ್ನ ನಡೆಸಿಕೊಂಡು ಬಂದ ದಾರಿಯನ್ನು ಹಾಗೂ ಸನ್ಮಾನದಿಂದ ನನಗೆ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ ಎಂದು ಹೇಳಿದರಲ್ಲದೇ ನಾನು ತಮಗೆ ಯಾವತ್ತೂ ಚಿರಋಣಿ ಎಂದು ಹೇಳಿದರು. ಬಿ ರಾಮಚಂದ್ರ ಭಟ್ಟ ವಂದಿಸಿದರು. ಎಂ.ಎನ್.ಹೆಗಡೆ ಕಾರ್ಯಕ್ರಮ ನಿರೂಪಣೆ ಮಾಡಿದರು. ನೂರಾರು ಜನರು ಶಿಬಿರದ ಪ್ರಯೋಜನ ಪಡೆದರು.