ನೇಪಾಳದಲ್ಲಿ ನಡೆದ ಸೌತ್ ಏಷಿಯನ್ ಸ್ಪೋರ್ಟ್ಸ್ 2023 ಕರಾಟೆ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಭಟ್ಕಳ ತಾಲೂಕಿನ ಮಂಜುನಾಥ ಗಜಾನನ ದೇವಡಿಗ, ಆರ್ಯನ್ ವಾಸುದೇವ ನಾಯ್ಕ, ಪ್ರವೀಣ್ ಹರಿಜನ್, ಭರಣಿ ಅದಿ ದ್ರಾವಿಡ್, ತೇಜಸ್ವಿ ಮೊಗೇರ, ಐವರು ವಿದ್ಯಾರ್ಥಿಗಳು ಚಿನ್ನ ಗೆದ್ದು ದೇಶ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

RELATED ARTICLES  ಅಂಜುಮನ್ ಕಾಲೇಜಿನಲ್ಲಿ ಗಿಟ್ ಮತ್ತು ಗಿಟ್ ಹಬ್ ಕುರಿತು ಪ್ರಾಯೋಗಿಕ ಕಾರ್ಯಾಗಾರ

ಇವರಿಗೆ ಭಟ್ಕಳದ ಶೂಟೋಕಾನ್ ಸಂಸ್ಥೆ ಮುಖ್ಯ ತರಬೇತುದಾರರಾದ ಸುರೇಶ್ ಮೊಗೇರ, ಉಮೇಶ ಮೊಗೇರ, ರಾಜಶೇಖರ ಗೌಡ ಹಾಗೂ ಗೋಪಾಲ್ ನಾಯ್ಕ ತರಬೇತಿ ನೀಡಿದ್ದಾರೆ. ಈ 5 ವಿದ್ಯಾರ್ಥಿಗಳು ಭಟ್ಕಳಕ್ಕೆ ಆಗಮಿಸುತ್ತಿದ್ದಂತೆ ಪಟ್ಟಣದ ನಾಗರಿಕರು ಹಾಗೂ ಸಂಘ ಸಂಸ್ಥೆಯ ಪ್ರತಿನಿಧಿಗಳು ಸರ್ಕಲ್‌ನಲ್ಲಿ ಅದ್ದೂರಿ ಸ್ವಾಗತ ನೀಡಿದರು.

RELATED ARTICLES  ಭೀಕರ ಅಪಘಾತ : ಯುವತಿ ಸ್ಥಳದಲ್ಲಿಯೇ ಸಾವು.

ಜ. 28 ರಿಂದ ಜ.30ರ ವರೆಗೆ ನಡೆದ ಸ್ಪರ್ಧೆಯಲ್ಲಿ ಶ್ರೀಲಂಕಾ, ಪಾಕಿಸ್ತಾನ, ಭೂತಾನ, ಬಾಂಗ್ಲಾದೇಶ ಮತ್ತು ಭಾರತದಿಂದ ಒಟ್ಟೂ 350 ಸ್ಪರ್ಧಾಳುಗಳು ಭಾಗವಹಿಸಿದ್ದರು. ಭಾರತದಿಂದ ಒಟ್ಟೂ 27 ಕ್ರೀಡಾಪಟುಗಳು ಭಾಗವಹಿಸಿದ್ದರು.