ಶಿರಸಿ: ಯುಟ್ಯೂಬ್‌ನಲ್ಲಿ ಪ್ರಸಾರವಾದ ಜಾಹೀರಾತು ನಂಬಿ ವ್ಯಕ್ತಿಯೋರ್ವ 7,15,511 ರೂ. ಕಳೆದುಕೊಂಡಿದ್ದಾರೆ. ತಾಲೂಕಿನ ಸಾಲ್ಕಣಿ ಸಮೀಪದ ತಟೀಸರದ ರಮೇಶ ಹೆಗಡೆ (48) ಮೋಸ ಹೋದ ವ್ಯಕ್ತಿ. ಇವರು ಯುಟ್ಯೂಬ್‌ ಆ್ಯಪ್‌ನಲ್ಲಿ ಬರುವ ವಿಡಿಯೋಗಳನ್ನು ನೋಡುತ್ತಿರುವಾಗ “OLD COIN SELLER” ಎನ್ನುವ ಜಾಹೀರಾತು ಬಂದಿದ್ದು, ಅದರಲ್ಲ ಹಳೆಯ ನಾಣ್ಯಗಳನ್ನು “OLD COIN SELLER” ಅವರಿಗೆ ನೀಡಿದರೆ ಲಕ್ಷಾಂತರ ರೂ. ಗಳಿಸಬಹುದು ಎಂದು ನಂಬಿಸಿ, ಒಟ್ಟೂ 7,15,511 ರೂ. ಗಳನ್ನು ವರ್ಗಾಯಿಸಿಕೊಂಡಿದ್ದಾರೆ. ಮೋಸ ಮಾಡಿದ ಆರೋಪಿತರಾದ ಕಲ್ಕತ್ತ ಮೂಲದ ಅಮನಕುಮಾರ ಹಾಗೂ ಪಂಕಜ ಸಿಂಗ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಮಾಂಗಲ್ಯದ ಸರ ಎಗರಿಸಿದ ಅಪರಿಚಿತ ವ್ಯಕ್ತಿ..!