ಕುಮಟಾ : ತಾಲೂಕಿನ ಊರಕೇರಿ ಮೂಲದ ಹೊಳೆಗದ್ದೆ ನಿವಾಸಿ, ಖ್ಯಾತ ಕೀರ್ತನಕಾರ ಹಾಗೂ ನರ್ಸಿಂಗ್ ಹೋಂ ನಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ದತ್ತಾತ್ರೇಯ ನಾಯ್ಕ ಸೇವೆಯಲ್ಲಿರುವಾಗಲೇ ಕುಸಿದು ಬಿದ್ದು ಮೃತಪಟ್ಟಿರುವ ‌ಘಟನೆ‌ ನಡೆದಿದೆ.

ದತ್ತಾತ್ರೇಯ ಗೋಪಾಲ‌ ನಾಯ್ಕ, ಜನಮೆಚ್ಚುಗೆಯ ಕೀರ್ತನೆಕಾರರೂ ಕೂಡಾ ಆಗಿದ್ದರು. ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೂ ಹೋಗಿ ಕೀರ್ತನೆ ಮಾಡುವ ಮೂಲಕ ಜನಪ್ರಿಯತೆ ‌ಪಡೆದಿದ್ದರು.

RELATED ARTICLES  ಯಕ್ಷಗಾನ‌ ಲೋಕದ ಗಾನ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ.

ಇವರು ಕಳೆದ ಸರಿಸುಮಾರು 20 ವರ್ಷದಿಂದ ಶಾರದಾ ನರ್ಸಿಂಗ್ ಹೋಂ‌ ನಲ್ಲಿ‌ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ಸಹ ಇವರು ನರ್ಸಿಂಗ್ ಹೋಂ ನಲ್ಲಿ ಸೇವೆಯಲ್ಲಿ ‌ಇರುವಾಗಲೇ ಕುಸಿದು ಬಿದ್ದಿದ್ದಾರೆ.

RELATED ARTICLES  11 ವರ್ಷದ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ವ್ಯಕ್ತಿ : ಕುಮಟಾದಲ್ಲಿ ದೂರು ದಾಖಲು.

ತಕ್ಷಣ ಅವರನ್ನ ಆಸ್ಪತ್ರೆ ವಾರ್ಡ್ ಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಮೃತರು ಓರ್ವ ಪುತ್ರ,ಪತ್ನಿ ಹಾಗೂ ಬಂಧು ಬಳಗ ಸೇರಿ ಅಪಾರ ಅಭಿಮಾನಿಗಳನ್ನ ಅಗಲಿದ್ದಾರೆ.