ಕಾರವಾರ : ಪ್ರಧಾನಿ ಮೋದಿ ದೇಶವನ್ನು ರಾಮ ರಾಜ್ಯವನ್ನು ಮಾಡುತ್ತಿದ್ದರೆ, ಸಿದ್ದರಾಮಯ್ಯನವರ ಸರ್ಕಾರ ರಾಜ್ಯವನ್ನು ರಾವಣ ರಾಜ್ಯ ಮಾಡುತ್ತಿದ್ದಾರೆ ಎಂದು ಸಂಸದ ಅನಂತ ಕುಮಾರ ಹೆಗಡೆ ಮತ್ತೆ ಸದ್ದುಮಾಡಿದ್ದಾರೆ. ಸಂಬಂಧಿಸಿದ ದಾಖಲೆಯನ್ನೂ ಬಿಡುಗಡೆಮಾಡಿ ಅವರು ತಿರುಗೇಟು ನೀಡಿದ್ದಾರೆ.

ಪತ್ರಿಕಾ ಪ್ರಕಟಣೆ ಮೂಲಕ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿರುವ ಅನಂತ ಕುಮಾರ ಹೆಗಡೆ ,ಸಿದ್ದರಾಮಯ್ಯ ಸರ್ಕಾರ ರಾಜ್ಯವನ್ನು ಲೂಟಿ ಮಾಡಲು ಹೊರಟಿದೆ , ಕಾಂಗ್ರೆಸ್ ಸರಕಾರ ರಾವಣ ರಾಜ್ಯ ಮಾಡಲು ಹೊರಟಿದೆ. ದಿನ ಬೆಳಗಾದರೇ ಒಂದಲ್ಲಾ ಒಂದು ದರ ಹೆಚ್ಚಿಸುವುದು ವಾಡಿಕೆ. ಕಾಂಗ್ರೆಸ್ ಸರಕಾರವು ಸಾರ್ವಜನಿಕರನ್ನು ಹಾಗೂ ಬಡವರವನ್ನು ಹೇಗೆ ಲೂಟಿ ಮಾಡುತ್ತಿದೆ ಎಂಬುದನ್ನು ಸಾರ್ವಜನಿಕರೇ ಪರಾಮರ್ಶಿಸಿ ನೋಡಿ ಎಂದು ತಿಳಿಸಿ ಸ್ಟಾಂಪ್ ದರ ಹೆಚ್ಚಳ ಮಾಡಲಾಗಿದೆ ಎಂದು ದಾಖಲೆ ಬಿಡುಗಡೆ ಮಾಡಿದ್ದಾರೆ.

RELATED ARTICLES  ಸಂಸದ ಕಾಗೇರಿಯವರ ಮನೆ ಸಮೀಪ ಚಿರತೆ ಪ್ರತ್ಯಕ್ಷ.

ಸ್ಟಾಂಪ ದರ ಹೆಚ್ಚಳದ ಅಂಕಿ ಅಂಶ

IMG 20240208 203410 960x1536 1