ಹೊನ್ನಾವರ : ತಾಲೂಕಿನ ವಿವಿಧ ವಸತಿ ಯೋಜನೆಯ ಫಲಾನುಭವಿಗಳಿಗೆ ಶಾಸಕ ದಿನಕರ ಶೆಟ್ಟಿ ಅವರು ಕಾರ್ಯಾದೇಶ ಪತ್ರವನ್ನು ಹಸ್ತಾಂತರಿಸಿದರು. ಕಡ್ಲೆ, ಕಡತೋಕಾ, ಚಂದಾವರ, ಹಳದಿಪುರ, ಸಾಲಕೋಡ, ನವಿಲುಗೋಣ, ಹಳದಿಪುರ ಹಾಗೂ ಮುಗ್ವಾ ಗ್ರಾಮಪಂಚಾಯತ್ ವ್ಯಾಪ್ತಿಯ ಒಟ್ಟು 149 ಫಲಾನುಭವಿಗಳು ಆದೇಶಪತ್ರವನ್ನು ಪಡೆದುಕೊಂಡರು. ಕಡ್ಲೆ ಗ್ರಾಮಪಂಚಾಯತದ ಉಪ್ಲೆಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗ್ರಾಮಪಂಚಾಯತ್ ಅಧ್ಯಕ್ಷರುಗಳಾದ ಸುಬ್ರಹ್ಮಣ್ಯ ಭಟ್, ಸಾವಿತ್ರಿ ಭಟ್, ಪ್ರೇಮಾ ನಾಯ್ಕ್, ಮಹಾದೇವಿ ನಾಯ್ಕ್, ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಿ. ಎಸ್. ನಾಯ್ಕ್, ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಕೃಷ್ಣಾನಂದ ಭಟ್, ಭಾರತೀಯ ಜನತಾ ಪಾರ್ಟಿಯ ಪ್ರಮುಖರಾದ ರವಿ ಹೆಗಡೆ, ಕೃಷ್ಣ ಗೌಡ ಕಡ್ನೀರು, ನಾಗರಾಜ ಭಾಗವತ್, ಗೋವಿಂದ ಗೌಡ, ಊರ್ಮಿಳಾ ಶೇಟ್, ರಾಘು ಭಟ್, ಮಂಜು ಮಡಿವಾಳ, ಹುದಾ ಹುಸೇನ್ ಶೇಖ್, ಮಹಾಬಲೇಶ್ವರ ಮಡಿವಾಳ, ಅಖಿಲ್ ಖಾಜಿ, ನಿರ್ಮಲಾ ಡಯಾಸ್, ಗ್ರಾಮ ಪಂಚಾಯತ್ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಹಾಗೂ ಇತರರು ಇದ್ದರು.