ಸಿದ್ದಾಪುರ: ರಸ್ತೆಯಲ್ಲಿ ಸಿಕ್ಕಿದ ಹಣ,ದಾಖಲೆ ಒಳಗೊಂಡ ಪರ್ಸ್ ನ್ನು ಸ್ಥಳೀಯ ಪಟ್ಟಣ ಪಂಚಾಯತ್ ಸದಸ್ಯ ನಂದನ್ ಬೋರ್ಕರ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಬುಧವಾರ ಸಂಜೆ ಮಾರುಕಟ್ಟೆ ಕಡೆಯಿಂದ ಮನೆ ಕಡೆಗೆ ಹೋಗುತ್ತಿರುವಾಗ ಹಾಳದಕಟ್ಟ ಬಳಿ ಬುಲೆಟ್ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಜೇಬಿನಿಂದ ಬಿದ್ದ ಪರ್ಸ ಸಿಕ್ಕಿತು, ಅದರಲ್ಲಿ ಹಣ ಹಾಗೂ ಅಗತ್ಯ ದಾಖಲೆಗಳು ಇದ್ದವು. ಅದು ಸೊರಬ ಮೂಲದ ಉದ್ರಿ ಗ್ರಾಮದ ಸುಮಂತ ಕುಮಾರ ಗೌಡ ಎನ್ನುವವರಿಗೆ ಸಂಬಂಧಪಟ್ಟಿರುವುದಾಗಿದ್ದವು. ನಂತರ ನಂದನ್ ಸೊರಬದ ತಮ್ಮ ಸ್ನೇಹಿತರಿಗೆ ಕರೆ ಮಾಡಿ ಸುಮಂತರವರ ನಂಬರ್ ಪಡೆದು ವಿಷಯ ತಿಳಿಸಿದ್ದು, ಗುರುವಾರ ಬೆಳಿಗ್ಗೆ ಸಿದ್ದಾಪುರ ಠಾಣೆಯಲ್ಲಿ ಪರ್ಸ್’ನಲ್ಲಿದ್ದ 3500 ರೂ ನಗದು ದಾಖಲೆಗಳು ಮತ್ತು ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಪಿಎಸ್ಐ ಅನಿಲ್ ಇವರ ಸಮಕ್ಷಮದಲ್ಲಿ ಹಿಂದುರುಗಿಸಿ ಪ್ರಾಮಾಣಿಕತೆ ಮೆರೆದು ಮೆಚ್ಚುಗೆ ಪಡೆದರು. ಪಿಎಸ್ಐ ಸೇರಿದಂತೆ ಠಾಣೆಯ ಅಧಿಕಾರಿಗಳು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES  ಪತ್ನಿಯನ್ನು ಅನುಮಾನಿಸಿದ ಪತಿ..? ಆತ್ಮಹತ್ಯೆ ಮಾಡುಕೊಂಡ ಪತ್ನಿ.