ಕುಮಟಾ : ಮಹಿಳೆಯೊಬ್ಬಳು ತಾಯಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ತಾಯಿ ಮನೆಗೂ ಹೋಗದೇ, ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದು, ಹೆಂಡತಿಯನ್ನು ಹುಡುಕಿಕೊಡುವಂತೆ ಅಳ್ವೆಕೋಡಿಯ ಗಜಾನನ ನಾಯ್ಕ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಅಳ್ವೆಕೋಡಿಯ ವಾಸಂತಿ ಗಜಾನನ ನಾಯ್ಕ (೬೫) ಕಾಣೆಯಾದ ಮಹಿಳೆ. ಅವರು ಫೆ.೪ ರಂದು ಬೆಳಿಗ್ಗೆ ೧೦.೩೦ ಗಂಟೆಯ ಸುಮಾರಿಗೆ ಹೆರವಟ್ಟಾದಲ್ಲಿರುವ ತನ್ನ ತಾಯಿ ಮನೆಗೆ ಹೋಗಿ ಬರುವುದಾಗಿ ಪಕ್ಕದ ಮನೆಯವರಲ್ಲಿ ಹೇಳಿ ಹೋಗಿದ್ದರು ಎನ್ನಲಾಗಿದೆ. ಆದರೆ ವಾಸಂತಿ ಅವರು ಮರಳಿ ಮನೆಗೆ ಬಾರದೇ, ತನ್ನ ತಾಯಿ ಮನೆ ಹೆರವಟ್ಟಾಗೂ ಹೋಗದೆ, ಸಂಬಂಧಿಕರ ಮನೆಗೂ ಸಹ ಹೋಗದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದು ಅವಳನ್ನು ಹುಡುಕಿ ಕೊಡಬೇಕು ಎಂದು ಗಜಾನನ ಗಣಪಯ್ಯ ನಾಯ್ಕ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES  ಭೀಮಣ್ಣ ನಾಯ್ಕ ಪರ ಪ್ರಚಾರಕ್ಕೆ ಬರಲಿದ್ದಾರೆ ಶಿವರಾಜಕುಮಾರ್..!