ಹೊನ್ನಾವರ: ತಾಲೂಕಾ ಮಟ್ಟದ ಗ್ರಾಮೀಣ ಕ್ರೀಡಾಕೂಟವು ಫೆ.12 ರಂದು ಮಂಕಿ ಬಣಸಾಲೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಗಣದಲ್ಲಿ ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಹೊನ್ನಾವರ ತಾಲೂಕಿನ ಪುರುಷ ಮತ್ತು ಮಹಿಳೆಯರಿಗಾಗಿ ಗ್ರಾಮೀಣ ಮಟ್ಟದ ಕಬಡ್ಡಿ, ಖೋಖೋ ಮತ್ತು ವಾಲಿಬಾಲ್‌ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪ್ರತಿ ಪಂಚಾಯತದಿಂದ ಪ್ರತ್ಯೇಕ ತಂಡಗಳು, ಒಂದೊಂದು ತಂಡ ಸ್ಪರ್ಧೆಗೆ ಅವಕಾಶವಿರಲಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕಾ ಯುವಜನ ಸೇವಾ ಕ್ರೀಡಾಧಿಕಾರಿಯ ದೂರವಾಣಿ ಸಂಖ್ಯೆ: +919448530726, +919632305456 ಈ ನಂಬರ್ ಸಂಪರ್ಕಿಸಬಹುದು. ಭಾಗವಹಿಸುವಂತಹ ಕ್ರೀಡಾಪಟುಗಳು ಕಡ್ಡಾಯವಾಗಿ ಗ್ರಾಮೀಣ ಪ್ರದೇಶದವರಾಗಿದ್ದು16 ವರ್ಷ ಮೇಲ್ಪಟ್ಟವರಾಗಿರಬೇಕು. ಕ್ರೀಡಾಪಟುಗಳು ಆಧಾರ ಕಾರ್ಡ ಸಮೇತ ಬರಬೇಕು.

RELATED ARTICLES  ನಾಪತ್ತೆಯಾಗಿದ್ದ ವೈದ್ಯ ವಾಪಸ್ಸು : ಭಟ್ಕಳದಿಂದ ಮುಂಬೈಗೆ ಹೋಗಿದ್ದ ವೈದ್ಯ.

ಯಾವುದೇ ರೀತಿಯ ಪ್ರಯಾಣ ಭತ್ಯೆ, ದಿನ ಭತ್ಯೆ ನೀಡಲಾಗುವುದಿಲ್ಲ. ವಿಜೇತ ಕ್ರೀಡಾ ತಂಡಕ್ಕೆ ಪ್ರಶಸ್ತಿ ಪತ್ರ ನೀಡಲಾಗುವುದು. ಪ್ರಥಮ ಸ್ಥಾನ ಪಡೆದ ತಂಡಗಳು ಜಿಲ್ಲಾ ಮಟ್ಟಕ್ಕೆ ಸ್ಪರ್ಧೆಗೆ ಅವಕಾಶ ಇರಲಿದೆ. ಪ್ರತಿ ಗ್ರಾ.ಪಂ ನಿಂದ ತಂಡದ ನೋಂದಣಿಯನ್ನು ಆಯಾ ಗ್ರಾಮ ಪಂಚಾಯತ ಪಿ.ಡಿ.ಓ ಮೂಲಕ ದೃಢೀಕರಿಸಿ ತಾಲೂಕಾ ಯುವಜನ ಸೇವಾ ಕ್ರೀಡಾಧಿಕಾರಿಗೆ ಫೆ. 10ರೊಳಗೆ ನೀಡಬೇಕು ಎಂದು ಯುವಜನಸೇವಾ ಕ್ರೀಡಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಸ್ಥಿತಿಗಾರ ಶಾಲೆಯಲ್ಲಿ ಚಿಣ್ಣರ ಯಕ್ಷಗಾನ