ಶಿರಸಿ : ಮನೆಯ ಆವಾರದಲ್ಲಿ ನಿಲ್ಲಿಸಿಟ್ಟ ಸ್ಕೂಟಿಗೆ ಬೆಂಕಿ ಹಚ್ಚಿ ಸುಟ್ಟು ತಲೆಮರೆಸಿಕೊಂಡಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಕಸ್ತೂರ ಬಾ ನಗರದ ಆರೋಪಿ ಸರ್ಫರಾಜ್ ಅಲಿಯಾಸ್ ಶಾರು ಸಮೀರ್ ಖಾನ್ ಬಂಧಿತ ಆರೋಪಿಯಾಗಿದ್ದಾನೆ. ಈತ ರೀತಿಕಾ ರಾಜಾರಾಮ್ ಕೇಣಿ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಆವಾರದಲ್ಲಿದ್ದ ಹೊಂಡಾ ಕಂಪೆನಿಯ ಡಿಯೋ ಸ್ಕೂಟಿ ಮತ್ತು ಮನೆಯ ಬಿಡಿಭಾಗಗಳನ್ನು ಸುಟ್ಟು ಹಾಕಿ ನಾಪತ್ತೆಯಾಗಿರುವ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ನಗರ ಠಾಣೆ ಪೊಲೀಸರು ತಲೆ ಮರೆಸಿಕೊಂಡಿದ್ದ ಸರ್ಫರಾಜ್ ಸಮೀರ್ ಖಾನ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES  ಶಿರಸಿಯಲ್ಲಿ ಭಾರೀ ಬೆಂಕಿ ಅವಘಡ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಎನ್, ಹೆಚ್ಚುವರಿ ಅಧೀಕ್ಷಕರಾದ ಸಿ.ಟಿ ಜಯಕುಮಾರ, ಜಗದೀಶ್ ಎಂ, ಶಿರಸಿ ಡಿಎಸ್ಪಿ ಗಣೇಶ ಕೆಎಲ್, ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆ ಪಿಎಸ್‌ಐ ನಾಗಪ್ಪ ಬಿ. ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಎಸ್‌ಐ ಅಶೋಕ ರಾಠೋಡ್, ಪ್ರಶಾಂತ್ ಪಾವಸ್ಕರ್, ಸದ್ದಾಂ ಹುಸೇನ್, ಪ್ರವೀಣ್ ಎನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

RELATED ARTICLES  ಏಕತಾ ಭಟ್ಟ ಗೆ ಐದು ಚಿನ್ನದ ಪದಕ.