ಕಾರವಾರ: ಸ್ಥಳೀಯ ಪ್ರತಿಭೆಯನ್ನು ಚದುರಂಗದತ್ತ ಹೆಚ್ಚಿನ ಆಸಕ್ತಿ ವಹಿಸುವ ನಿಟ್ಟಿನಲ್ಲಿ ಫೆ. 11ರಂದು ಮುಕ್ತ ಚೆಸ್‌ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಚೆಸ್ ತರಬೇತುದಾರ ಓಂ ಚೆಸ್ ಕೋಚಿಂಗ್ ಕೇಂದ್ರದ ತರಬೇತುದಾರ ಮದನ್ ತಳೇಕರ ಹೇಳಿದ್ದಾರೆ.

RELATED ARTICLES  ಎರಡು ಗುಂಪುಗಳ ನಡುವೆ ಮಾರಾಮಾರಿ : ಇಬ್ಬರಿಗೆ ಚಾಕು ಇರಿತ.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಸವಿತಾ ವೃತ್ತದ ಸಮೀಪದಲ್ಲಿರುವ ತ್ರಿಮೂರ್ತಿ ಪಂದ್ಯಾವಳಿ ಬಿಲ್ಡಿಂಗ್‌ನಲ್ಲಿ ಶಕ ನಡೆಯಲಿದೆ. 10, 12, 14 33 16 ವರ್ಷದೊಳಗಿನವರಿಗೆ ಮತ್ತು 16 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು. ನೋಂದಣಿಗೆ ಫೆ.10 ಕೊನೆಯ ದಿನವಾಗಿದೆ. ಮೊದಲ 150 ನೋಂದಣಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ನೋಂದಣಿಗೆ ಮದನ ತಳೇಕರ (7676802833), ನೀಲಂ ಕಾಂಬ್ಳೆ (9448406892) ಸಂಪರ್ಕಿಸಬಹುದು ಎಂದರು. ಕ್ಷಮಾ ಬಾಡಕರ, ಶ್ವೇತಾ ಹೇಮಗಿರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

RELATED ARTICLES  ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ.ಅಂಜಲಿ ನಿಂಬಾಳ್ಕರ್