ಜೋಯಿಡಾ: ತಾಲ್ಲೂಕಿನ ಪ್ರಧಾನಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಜನತಾ ಕಾಲೋನಿಯ‌‌ ನಿವಾಸಿಯೋರ್ವರು ನಾಪತ್ತೆಯಾದ ಘಟನೆ ನಡೆದಿರುವುದರ ಬಗ್ಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಿಂದ ಮಾಹಿತಿ ಲಭ್ಯವಾಗಿದೆ.

ಜನತಾ ಕಾಲೋನಿಯ‌‌ ನಿವಾಸಿ 50 ವರ್ಷ ವಯಸ್ಸಿನ ಲಕ್ಷ್ಮಣ ಬಾಳಪ್ಪಾ ಮೇದಾರ ಎಂಬವರೇ ನಾಪತ್ತೆಯಾಗಿರುವ ವ್ಯಕ್ತಿಯಾಗಿದ್ದಾರೆ. ಇವರು ಮನೆಯಿಂದ ಹೋದವರು ಮರಳಿ‌ ಮನೆಗೆ ಬಾರದೇ ಇದ್ದಾಗ, ಸುತ್ತಮುತ್ತಲು ಹುಡಕಾಡಿದರೂ ಯಾವುದೇ ಸುಳಿವು ದೊರೆತಿಲ್ಲ. ನಾಪತ್ತೆಯಾದ ತಂದೆ ಲಕ್ಷ್ಮಣ ಬಾಳಪ್ಪಾ ಮೇದಾರ ಅವರನ್ನು ಹುಡುಕಿಕೊಡುವಂತೆ ಅವರ ಪುತ್ರ ಗಣೇಶ ಲಕ್ಷ್ಮಣ ಮೇದಾರ ಅವರು ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದಾಂಡೇಲಿ ಗ್ರಾಮೀಣ ಪೊಲೀಸರು ದೂರು ಸ್ವೀಕರಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

RELATED ARTICLES  ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ?ಯಾವ ರಾಶಿಯವರಿಗೆ ಏನು ಫಲ? ಅದೃಷ್ಟ ಸಂಖ್ಯೆ ಯಾವುದು? ದಿನಾಂಕ 04/10/2018 ರ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ …