ಕುಮಟಾ : ಇಲ್ಲಿನ ಲಯನ್ಸ್ ಹ್ಯುಮೆನಿಟೇರಿಯನ್ ಸರ್ವೀಸ್ ಟ್ರಸ್ಟ್ ನ  ಲಯನ್ಸ್ ರೇವಣಕರ್ ಚಾರಿಟೇಬಲ್ ಕಣ್ಣಿನ ಆಸ್ಪತ್ರೆಯಿಂದ ಕುಮಟಾ ತಾಲೂಕು ಹೊಲನಗದ್ದೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.

ಈ ಸಂದರ್ಭದಲ್ಲಿ ಲಯನ್ಸ್ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ  ಜಯದೇವ ಬಳಗಂಡಿಯವರು ಶಿಬಿರದ ಉದ್ದೇಶ, ಕಣ್ಣಿನ ಮಹತ್ವ,ಅದರ ರಕ್ಷಣೆ ಹಾಗೂ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು. ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತಾಗಿ ವಿವರಿಸಿದರು.

RELATED ARTICLES  ಸುಬ್ರಾಯ ವಾಳ್ಕೆ ಕೊಂಕಣಿ ಸಂಘಟನೆಗಳ ನೇತ್ರತ್ವ ವಹಿಸಿಕೊಳ್ಳಲಿ, ನಾವು ಬೆಂಬಲಿಸುತ್ತೇವೆ : ಮುರಳೀಧರ ಪ್ರಭು.

ಆಸ್ಪತ್ರೆಯ ನೇತ್ರತಜ್ಙ ಡಾ.ರಾಜಶೇಖರ ಅವರು ಕಣ್ಣಿನ  ಸುರಕ್ಷಿತತೆ ಬಗ್ಗೆ ಮುಂಜಾಗೃತಾ ಕ್ರಮಗಳು ಹಾಗೂ ತುರ್ತು ಸಂದರ್ಭದಲ್ಲಿ ಕೈಕೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಿದರು. ಶಾಲಾ ಮುಖ್ಯಾಧ್ಯಾಪಕ ರವೀಂದ್ರ ಭಟ್ಟ ಸೂರಿಯವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ನೇತ್ರತಜ್ಙ  ಡಾ.ರಾಜಶೇಖರ ರವರು ಶಾಲೆಯ ಎಲ್ಲ 137 ವಿದ್ಯಾರ್ಥಿಗಳ ಕಣ್ಣಿನ ತಪಾಸಣೆ ಮಾಡಿ ನ್ಯೂನ್ಯತೆಗಳನ್ನು ಗುರುತಿಸಿ ಚಿಕಿತ್ಸೆ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಪಾಲಕರ ಜೊತೆ ಆಸ್ಪತ್ರೆಗೆ ಬಂದು ಸೂಕ್ತ ಚಿಕಿತ್ಸೆಯನ್ನು ಉಚಿತವಾಗಿ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

RELATED ARTICLES  ಶೌಚಾಲಯದ ಇಂಗು ಹೊಂಡದಲ್ಲಿ ಶವ ಪತ್ತೆ.

ಶಿಬಿರದಲ್ಲಿಆಸ್ಪತ್ರೆಯ ನುರಿತ ನರ್ಸಗಳು ಹಾಗೂ ಸಿಬ್ಬಂದಿಗಳು ಸಹಕರಿಸಿದರು. ಹೊಲನಗದ್ದೆ ಕ್ಲಸ್ಟರ್ ನ ಸಿ ಆರ್ ಪಿ ಗಳಾದ ಮಹೇಶ ನಾಯ್ಕ, ಶಾಲಾ ಸಹಶಿಕ್ಷಕಿ ವೀಣಾ ನಾಯ್ಕ, ಮಂಗಲಾ ನಾಯ್ಕ, ಶಾಮಲಾ ಎಂ ಪಟಗಾರ,  ಶ್ಯಾಮಲಾ ಬಿ ಪಟಗಾರ್, ಶ್ರೀಮತಿ ದೀಪ ನಾಯ್ಕ , ಶೃತಿ ನಾಯ್ಕ ಉಪಸ್ಥಿತರಿದ್ದರು.