ಕುಮಟಾ : ಐ.ಸಿ.ಎ.ಐ. ನಡೆಸಿದ ಸಿ.ಎ. ಫೌಂಡೇಶನ್ ಪರೀಕ್ಷೆ ೨೦೨೩ ರ ಫಲಿತಾಂಶ ಪ್ರಕಟಗೊಂಡಿದ್ದು, ತಾಲೂಕಿನ ಗೋರೆಯ ಕೆನರಾ ಎಕ್ಸಲೆನ್ಸ್ ಪ.ಪೂ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ ಇದೀಗ ಉನ್ನತ ಶಿಕ್ಷಣ ಪಡೆಯುತ್ತಿರುವ ಯಲ್ಲಾಪುರ ತಾಲೂಕಿನ ಗುಳ್ಳಾಪುರದ ಕು. ವೈಶಾಲಿ ವಿ. ಭಟ್ಟ ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದಿದುವ ಮೂಲಕ ಸಾಧನೆ ಮಾಡಿದ್ದಾಳೆ. 

RELATED ARTICLES  ಗೋ ಸಂಧ್ಯಾ ಕಾರ್ಯಕ್ರಮ ಸಂಪನ್ನ : ಗೋವಿನ ಉಳಿವಿಗೆ ಪಣ ತೊಡಲು ಕರೆ.

ಈಕೆ ಕಾಲೇಜು ಶಿಕ್ಷಣದ ಜೊತೆಗೆ ಸಿ.ಎ. ಫೌಂಡೇಶನ್ ಕೋಚಿಂಗ್ ಪಡೆದಿದ್ದು ಪಿಯುಸಿ ಪರೀಕ್ಷೆಯಲ್ಲೂ ೯೭% ಅಂಕಗಳೊಂದಿಗೆೆ ತೇರ್ಗಡೆ ಹೊಂದಿ ಕಾಲೇಜಿಗೆ ಕೀರ್ತಿ ತಂದವಳಾಗಿದ್ದಾಳೆ.

ಪ್ರಸ್ತುತ ಮಂಗಳೂರಿನಲ್ಲಿ ಬಿ.ಕಾಂ. ಮೊದಲ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವೈಶಾಲಿ, ಗುಳ್ಳಾಪುರದ ವೆಂಕಟ್ರಮಣ ಭಟ್ಟ ಹಾಗೂ ವೇದಾ ಭಟ್ಟ ದಂಪತಿ ಪುತ್ರಿ. ಸಂಸ್ಥೆಗೆ ಕೀರ್ತಿ ತಂದ ಈ ವಿದ್ಯಾರ್ಥಿನಿಯ ಸಾಧನೆಗೆ ಕೆನರಾ ಎಕ್ಸಲೆನ್ಸ್ ಕಾಲೇಜಿನ ಅಧ್ಯಕ್ಷರಾದ ಡಾ. ಜಿ. ಜಿ ಹೆಗಡೆ, ಪ್ರಾಚಾರ್ಯ ಡಿ. ಎನ್. ಭಟ್ಟ, ಹಾಗೂ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿ ಮುಂದಿನ ಸಾಧನೆಗೆ ಶುಭ ಹಾರೈಸಿದ್ದಾರೆ. 

RELATED ARTICLES  ಬಾಡದ ಶ್ರೀ ಕಾಂಚಿಕಾಂಬಾ ದೇವಾಲಯಕ್ಕೆ ಆರ್.ವಿ ದೇಶಪಾಂಡೆ ಭೇಟಿ.