ಗೋಕರ್ಣ : ನಾಪತ್ತೆಯಾಗಿದ್ದ ಜಪಾನ್ ದೇಶದ ಪ್ರವಾಸಿ ಮಹಿಳೆ ಕೇರಳದಲ್ಲಿ ಪತ್ತೆಯಾಗಿದ್ದಾಳೆ. ಕೇರಳ ತಿರುವನಂತಪುರದಲ್ಲಿ ಜಪಾನಿ ಮಹಿಳೆ ಸಿಕ್ಕಿರುವುದಾಗಿ ಪೊಲೀಸ್ ಮೂಲದಿಂದ ಮಾಹಿತಿ ಲಭ್ಯವಾಗಿದೆ.

ಎಮಿ ಯಮಾಝಕಿ (43) ನಾಪತ್ತೆಯಾಗಿದ್ದ ಜಪಾನ್ ಮೂಲದ ಪ್ರವಾಸಿ ಮಹಿಳೆಯಾಗಿದ್ದಾಳೆ. ಪಿಎಸ್ಐ ಖಾದರ್ ಭಾಷಾ ಮತ್ತು ಸುಧಾ ಅಘನಾಶಿನಿ ನೇತತ್ವದ ವಿಶೇಷ‌ ತಂಡದಿಂದ ಕಾರ್ಯಾಚರಣೆ ನಡೆದು, ಕೇರಳದಲ್ಲಿ ಮಹಿಳೆಯ ಪತ್ತೆಯಾಗಿದ್ದಾಳೆ.

RELATED ARTICLES  ನಗ್ನವಾಗಿ ಓಡಾಡಿ ಮುಜುಗರ ಉಂಟುಮಾಡುತ್ತಿದ್ದ ಮಾನಸಿಕ ಅಸ್ವಸ್ಥ : ಮಾನವೀಯತೆ ಮೆರೆದ ಪೊಲೀಸರು.

ಫೆಬ್ರುವರಿ 4ರಂದು ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕಾಟೇಜ್‌ನಲ್ಲಿ ತನ್ನ ಪತಿಯ ಜತೆ ತಂಗಿದ್ದ ಮಹಿಳೆ, ಫೆಬ್ರುವರಿ 5ರಂದು ಬೆಳಗ್ಗೆ 10.15ಕ್ಕೆ ಪತಿ ಮಲಗಿದ್ದ ವೇಳೆ ನೇಚರ್ ಕಾಟೇಜ್‌ನಿಂದ ಹೊರ ಹೋಗಿ ನಾಪತ್ತೆಯಾಗಿದ್ದರು. ಮಹಿಳೆಯ ಪತಿ ದೈ ಯಮಾಝಕಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

RELATED ARTICLES  ಪೊಲೀಸ್ ಠಾಣೆಯಲ್ಲಿಯೇ ಸ್ಯೂಸೈಡ್ ಮಾಡಿಕೊಂಡ ವ್ಯಕ್ತಿ.

ಮಹಿಳೆಯ ನಾಪತ್ತೆ ಘಟನೆಯ ಮರುದಿನ ಪತಿಯ ಮೊಬೈಲ್‌‌ಗೆ ಇ- ಮೇಲ್ ಸಂದೇಶ ಬಂದಿತ್ತು, ಅದನ್ನು ಆಧರಿಸಿ ತಂಡದೊಂದಿಗೆ ಕೇರಳಕ್ಕೆ ರವಾನೆಯಾಗಿದ್ದ ಗೋಕರ್ಣ ಪೊಲೀಸರು, ಗಂಡನ ಮೇಲಿನ ಕೋಪದಿಂದ ರೈಲು ಹತ್ತಿಕೊಂಡು ಮಹಿಳೆ ಸೀದಾ ಕೇರಳಕ್ಕೆ ಹೋಗಿರುವುದಾಗಿ ಮಾಹಿತಿ ಲಭ್ಯವಾಗಿದೆ.