ಕುಮಟಾ : ಶನಿವಾರ ಕುಮಟಾಕ್ಕೆ ಆಗಮಿಸಿದ ಭಾರತ್ ಅಕ್ಕಿಯನ್ನು ಖರೀಧಿಸಲು ಜನರು ಮುಗಿಬಿದ್ದ ದೃಶ್ಯ ಕಂಡುಬಂತು. ಕುಮಟಾದ ಮಣಕಿ ಮೈದಾನದ ಪಕ್ಕ ಅಕ್ಕಿ ಗಾಡಿ ಬಂದು ನಿಂತಿರುವುದನ್ನು ಗಮನಿಸಿದ ಸಾರ್ವಜನಿಕರು ಅಕ್ಕಿ ಖರೀಧಿಗೆ ಮುಂದಾಗಿದ್ದಾರೆ. ಪೊಲೀಸರು ಜನದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ, ಬಿಜೆಪಿ ಕಾರ್ಯಕರ್ತರ ಸಹಕಾರದೊಂದಿಗೆ ಮಣಕಿ ಮೈದಾನದ ಒಳಗೆ ಗಾಡಿ ನಿಲ್ಲಿಸಿ, ಜನರ ಸರತಿ ಸಾಲು ಮಾಡಿ ವ್ಯವಸ್ಥಿತವಾಗಿ ಅಕ್ಕಿ ಕೊಡುವ ವ್ಯವಸ್ಥೆ ಮಾಡಿದ್ದಾರೆ.

RELATED ARTICLES  ಉಚಿತ ಊಟ ನೀಡಿ ರಾಮ ಪ್ರೇಮ ಮೆರೆದ ತಿಗಣೇಶಣ್ಣ.

ನಾಳೆ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ನಡೆಯಲಿದ್ದು, ತಿಂಗಳಿಗೆ 6 ದಿನ ಭಾರತ್ ಅಕ್ಕಿಯ ಮಾರಾಟ ಕುಮಟಾದಲ್ಲಿ ನಡೆಯಲಿದೆ. ಅದು ಯಾವ ದಿನಗಳಂದು ಎಂಬುದನ್ನು ನಾಳೆ ಸಭೆಯಲ್ಲಿ ಅಂತಿಮ ಮಾಡಲಾಗುವುದು ಎಂದು ಅಕ್ಕಿ ಮಾರಾಟಗಾರರು ತಿಳಿಸಿದರು.

RELATED ARTICLES  ಮತ್ತೆ ಕುಮಟಾದಲ್ಲಿ ಚಿರತೆಯ ಭಯ : ಮನೆಯಂಗಳದಲ್ಲಿಯೇ ಇತ್ತು ಭೀಕರ ಚಿರತೆ. ಸಿ.ಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ನೋಡಿದ್ರೆ ಮೈ ಜುಂಮ್ ಆಗುತ್ತೆ.