ಕುಮಟಾ ;  ಎನ್ಸೆಸ್ಸೆಸ್ ಶಿಬಿರವು ವಿದ್ಯಾರ್ಥಿ ಜೀವನದ ಒಂದು ಅಪೂರ್ವ ಕ್ಷಣ. ವಿದ್ಯಾರ್ಥಿ ಜೀವನದಿಂದಲೇ ಸೇವಾ ಭಾವನೆಯನ್ನು ಮೂಡಿಸಿಕೊಳ್ಳುವಲ್ಲಿ ಈ ಶಿಬಿರವೂ ಸಹಾಯಕವಾಗುವುದು ಅಂತಹ ಸೇವಾ ಮನೋಭಾವನೆ ಬೆಳೆಸಿಕೊಳ್ಳಿ ಎಂದು ಕುಮಟಾ – ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ಶಾರದಾ ಮೋಹನ ಶೆಟ್ಟಿಯವರು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಅವರು ಅಳ್ವೆಕೋಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ನೆಲ್ಲಿಕೇರಿ ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ಸೆಸ್ಸೆಸ್ ಘಟಕದ ಈ ಸಾಲಿನ ಎನ್ಸೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ,ವಿದ್ಯಾರ್ಥಿಗಳಿಗೆ ಸಹಬಾಳ್ವೆ -ಸಹ ಜೀವನವನ್ನು ಇಂತಹ ಎನ್ಸೆಸ್ಸೆಸ್ ಶಿಬಿರವು ನಮಗೆ ಕಲಿಸುವುದು ಇದರ ಪ್ರಯೋಜನವನ್ನು ಜೀವನದುದ್ದಕ್ಕೂ ಪಡೆದುಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉತ್ತರ ಕನ್ನಡ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ರೀ ಕೆ.ಟಿ..ಭಟ್ಟ ಅವರು ವಹಿಸಿ ,ಎನ್ಸೆಸ್ಸೆಸ್ ನ ಮೂಲಕ ,ರಾಷ್ಟ್ಟ ಕಟ್ಟುವ ಕಾರ್ಯದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಿಬೇಕೆಂದರು.ಕಾರ್ಯಕ್ರಮದಲ್ಲಿ ಶ್ರೀ ತಿಮ್ಮು ಎನ್ ಮುಕ್ರಿ,ಸುಮನಾ ಭಂಡಾರಿ,ಶ್ರೀ ಗೋಪಾಲಕೃಷ್ಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಕಾಲೇಜಿನ ಎನ್ಸೆಸ್ಸೆಸ್ ಕಾರ್ಯಕ್ರಮಾಧಿಕಾರಿ ಶ್ರೀ ಗಣೇಶ ಭಟ್ಟ ಸ್ವಾಗತಿಸಿ ನಿರ್ವಹಿಸಿದರು.ಹಿರಿಯ ಉಪನ್ಯಾಸಕರಾದ ಶ್ರೀ ಮೋಹನ ವಿ ನಾಯಕ ವಂದಿಸಿದರು.

RELATED ARTICLES  ಹದಿಹರೆಯ ವಯೋಮಾನದ ಮಕ್ಕಳಲ್ಲಿ ಉಂಟಾಗುವ ಸಮಸ್ಯೆಗಳ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ.