ಕುಮಟಾ : ಆಯುಷ್ ಇಲಾಖೆ ಬೆಂಗಳೂರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ, ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ ಕಾರವಾರ, ಸಮಾಜ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತಿ ಹಿರೇಗುತ್ತಿ, ಸರಕಾರಿ ಆಯುರ್ವೇದ ಆಸ್ಪತ್ರೆ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ 2023-24 ನೇ ಸಾಲಿನ ಎಸ್ ಸಿ ಎಸ್ ಪಿ ಯೋಜನೆಯಡಿ ಆಯುಷ್ ಸೇವಾಗ್ರಾಮ ಕಾರ್ಯಕ್ರಮದ ಅಡಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ದಿನಾಂಕ ಫೆ.13 ರಂದು ಬೆಳಗ್ಗೆ 10.00 ರಿಂದ ತಾಲೂಕಿನ ಹಿರೇಗುತ್ತಿ, ಮೊರಬದ ಅಂಬೇಡ್ಕರ ಸಭಾಭವನದಲ್ಲಿ ನಡೆಯಲಿದೆ.

RELATED ARTICLES  ಕಲಬುರ್ಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ಪ್ರತಿನಿದಿ ಶುಲ್ಕ ತುಂಬಲು ಜ. 25 ಕೊನೆಯ ದಿನಾಂಕ.

ಗ್ರಾಮ ಪಂಚಾಯತ ಅಧ್ಯಕ್ಷ ಶಾಂತ ನಾರಾಯಣ ನಾಯಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಿರೇಗುತ್ತಿ ಮೊರಬದ ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ಸರಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಭಾರತಿ ಪಿ.ಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಗವ್ಯ ಉತ್ಪನ್ನ ಶಿಬಿರ: ನೊಂದಾವಣೆಗೆ ಅವಕಾಶ