ಕುಮಟಾ-ಹೊನ್ನಾವರ ಮಾರ್ಗದಲ್ಲಿ ನಾಲ್ಕು ಮಿನಿ ಬಸ್‌ಗಳನ್ನು ಬಿಟ್ಟಿರುವ ಕಾರಣದಿಂದ ಕುಪಿತಗೊಂಡ ಟೆಂಪೋ ಮಾಲಕರು, ಚಾಲಕರು, ಟೆಂಪೋ ಚಾಲಕ, ಮಾಲಕ ಸಂಘದ ಅಡಿಯಲ್ಲಿ ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಕುಮಟಾದ ಗಿಬ್ ವೃತ್ತದಲ್ಲಿ ಮಿನಿ ಬಸ್ ತಡೆದು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ಕುಮಟಾ-ಸಿದ್ದಾಪುರಕ್ಕೆ ಸೀಮಿತವಾಗಿದ್ದ ಗಜಾನನ ಬಸ್ ಸಂಸ್ಥೆಯವರು ಕುಮಟಾ-ಹೊನ್ನಾವರ ರೂಟ್‌ಗೂ ಪರ್ಮಿಟ್ ಪಡೆದು ನಾಲ್ಕು ಮಿನಿ ಬಸ್‌ಗಳನ್ನು ಬಿಟ್ಟಿದ್ದಾರೆ. ಇದರಿಂದ ಇದೇ ರೂಟ್‌ನಲ್ಲಿ ಟೆಂಪೋ ಓಡಿಸುತ್ತಿದ್ದ ಚಾಲಕರಿಗೆ ತೊಂದರೆಯಾಗಿದೆ.
ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಪಟ್ಟಣದ ಗಿಬ್ ಸರ್ಕಲ್‌ನಲ್ಲಿ ಜಮಾಯಿಸಿ, ಮಿನಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಮಿನಿ ಬಸ್‌ನ್ನು ಸಿದ್ದಾಪುರ ರೂಟ್‌ಗೆ ತಿರುಗಿಸಿ, ಚಾಲಕ ಮತ್ತು ನಿರ್ವಾಹಕರ ಮೂಲಕ ಬಸ್ ಸಂಸ್ಥೆಯ ಮಾಲೀಕರಿಗೆ ಈ ಭಾಗದ ಸ್ಥಳೀಯ ಟೆಂಪೊ ಚಾಲಕರ ಹೊಟ್ಟೆಯ ಮೇಲೆ ಹೊಡೆಯದಂತೆ ಶಾಸಕರು ತಿಳಿಸಿದರು. ಅಲ್ಲದೇ ಸ್ಥಳಕ್ಕೆ ಆರ್‌ಟಿಓ ಅಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳನ್ನು ಕರೆಯಿಸಿದ ಶಾಸಕರು, ಈ ಮಿನಿ ಬಸ್‌ಗಳ ಪರ್ಮಿಟ್ ಬಗ್ಗೆ ಪರಿಶೀಲಿಸುವ ಜೊತೆಗೆ ಸ್ಥಳೀಯ ಟೆಂಪೋ ಚಾಲಕರಿಗೆ ಅನ್ಯಾಯವಾಗದ ರೀತಿಯಲ್ಲಿ ಸಮಸ್ಯೆ ಪರಿಹರಿಸಲು ಸೂಚಿಸಿದರು.