ಕುಮಟಾ : ಹೆಸ್ಕಾಂ ಉಪವಿಭಾಗದ ವ್ಯಾಪ್ತಿಯ ೧೧೦/೩೩/೧೧ ಕೆ.ವಿ ಗ್ರಿಡ್‌ನಲ್ಲಿ ನಿರ್ವಹಣಾ ಕಾಮಗಾರಿ ಇರುವ ಕಾರಣ ನಾಡಿದ್ದು ದಿ: ೧೪.೦೨.೨೦೨೪ ಬುಧವಾರದಂದು ನಗರ ಶಾಖೆಯ ಇಂಡಸ್ಟಿçಯಲ & ಗ್ರಾಮೀಣ ಶಾಖೆಯ ವಾಲಗಳ್ಳಿ ಫಿಡರಿನ ಎಲ್ಲಾ ಭಾಗಗಳಲ್ಲಿ ಬೆಳಿಗ್ಗೆ ೦೯:೩೦ಗಂಟೆಯಿಂದ ಸಂಜೆ ೪:೦೦ ಗಂಟೆಯವರೆಗೆ ಹಾಗೂ  ೧೧ ಕೆ.ವಿ ಮಾರ್ಗದಲ್ಲಿ ಹೆಸ್ಕಾಂರವರ ಕಾಮಗಾರಿ ಇರುವುದರಿಂದ ಗ್ರಾಮೀಣ ಪ್ರದೇಶದ ಫೀಡರಗಳಾದ ಸಂತೆಗುಳಿ ಮತ್ತು ಉಳ್ಳೂರುಮಠ ಫೀಡರಿನ ಎಲ್ಲಾ ಭಾಗಗಳಲ್ಲಿ ಮತ್ತು ಕುಮಟಾ ಟೌನ ಫೀಡರಿನ ಕೆಲವು ಭಾಗಗಳಲ್ಲಿ ಬೆಳಿಗ್ಗೆ ೦೯:೩೦ಗಂಟೆಯಿಂದ ೨:೦೦ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆಯೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು(ವಿ), ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ಕುಮಟಾ ಇವರು ಪ್ರಕಟಣೆ ನೀಡಿರುತ್ತಾರೆ. ಈ ಭಾಗದ ಗ್ರಾಹಕರು ಸಹಕರಿಸಲು ಕೋರಿರುತ್ತಾರೆ.

RELATED ARTICLES  ಬ್ಯಾಂಕ್ ಆಫ್ ಬರೋಡ: 427 ವಿವಿಧ ಹುದ್ದೆಗಳ ನೇಮಕಾತಿ