ಸಮಾಜದ ಬಗ್ಗೆ ಕಾಳಜಿ ,ಎಲ್ಲೋಂದಿಗೆ ಹೊಂದಿಕೊಂಡು ಬಾಳುವ ಸಾಮುದಾಯಿಕ ಪ್ರಜ್ಞೆ,ಸರಕಾರ ದೋರಣೆ ಇವು ಎನ್ಸೆಸ್ಸೆಸ್ ಶಿಬಿರದಿಂದಾಗುವ ಲಾಭಗಳು,ಇವನ್ನು ನೀವು ಜೀವನದುದ್ದಕ್ಕು ಉಳಿಸಿ ಬೆಳೆಸಿಕೊಳ್ಳಿ ಎಂದು ಉತ್ತರಕನ್ನಡ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀರತ್ನಾಕರ ನಾಯ್ಕ ಶಿಬಿರಾರ್ಥಿಗಳಿಗೆ ಕರೆನೀಡಿದರು. ಅವರು ಅವರು ಅಳ್ವೆಕೋಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ನೆಲ್ಲಿಕೇರಿ ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ಸೆಸ್ಸೆಸ್ ಘಟಕದ ಈ ಸಾಲಿನ ಎನ್ಸೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ,ಪಿ.ಯು.ಸಿ ಜೀವನದ ಮಹತ್ವರ ಘಟ್ಟ ಇದು ಬೆಟ್ಟವು ಹೌದು,ಸರಿಯಾಗಿ ಈ ಹಂತವನ್ನು ಉಪಯೋಗಿಸಿಕೊಂಡರೇ ಜೀವನ ಪೂರ್ತಿ ಸುಖವಾಗಿರಬಹುದು .ಈ ಹಂತದಲ್ಲಿ ಏರ್ಪಡಿಸಿದ ಎನ್ಸೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರವು ನಿಮ್ಮಲ್ಲಿ ಅರಿವಿನ ಹೊಸತನ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸತೀಶ ಬಿ ನಾಯ್ಕ ವಹಿಸಿ ಸಮಯ,ಸಾರ್ಮಥ್ಯ,ನೀರು ,ಆಹಾರ ಸದುಪಯೋಗ ಪಡಿಸಿಕೊಳ್ಳಿ ಎಂದರು.ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಾದ ಕುಮಾರ ಭಾರ್ಗವ ,ಕು ಅಶ್ವಿನಿ ಶಿಬಿರದ ವರದಿ ಮಂಡಿಸಿದರು. ಕು. ಓಂಕಾರಿ ಅಂಬಿಗ, ಕು ನಾಗೇಂದ್ರ ಮುಂತಾದವರು ಅನುಭವ ಕಥನ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯನಿರ್ವಾಕ ಇಂಜಿನಿಯರ್ ಶ್ರೀ ರಾಘವೇಂದ್ರ ನಾಯ್ಕ, ಅಳ್ವೆಕೋಡಿ ಗ್ರಾ .ಪಂ ಅಧ್ಯಕ್ಷ ಶ್ರೀ ವಿರೂಪಾಕ್ಷ ನಾಯ್ಕ , ಕುಮಟಾ ಲಾಯ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ವೀರಾ ಎಸ್ ನಾಯಕ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಅಡಿಗುಂಡಿ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತಿದ್ದರು,
ಕಾಲೇಜಿನ ಎನ್ಸೆಸ್ಸೆಸ್ ಕಾರ್ಯಕ್ರಮಾಧಿಕಾರಿ ,ಸಂಸ್ಕøತ ಉಪನ್ಯಾಸಕರಾದ ಶ್ರೀ ಗಣೇಶ ಭಟ್ಟ ಸರ್ಮರನ್ನು ಸ್ವಾಗತಿಸಿದರು.ಆಂಗ್ಲಭಾಷಾ ಹಿರಿಯ ಉಪನ್ಯಾಸಕ ಶ್ರೀ ಮೋಹನ ವಿ ನಾಯಕ ವಂದಿಸಿದರು. ಕನ್ನಡ ಭಾಷಾ ಉಪನ್ಯಾಸಕಿ ಶ್ರೀ ಮತಿ ರೇಣುಕಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES  ರಾಮಕೃಷ್ಣ ಹೆಗಡೆ ಜನ್ಮದಿನೋತ್ಸವ ಅಗಸ್ಟ 29ಕ್ಕೆ