ಬೆಂಗಳೂರು : ವ್ಯಾಪಾರದಲ್ಲಿ ಡಿಜಿಟಲೀಕರಣ ಹೆಚ್ಚಿಸುವ ಸಲುವಾಗಿ ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವೆಬಿನಾರ್ ಆಯೋಜನೆ ಮಾಡಿದೆ. ಡಿಜಿಟಲ್ ಮಾರ್ಕೆಟಿಂಗ್ ಮೂಲಕ ವ್ಯಾಪಾರವನ್ನು ಹೇಗೆ ಅಭಿವೃದ್ಧಿಗೊಳಿಸಬಹುದು ಎನ್ನುವುದರ ಕುರಿತಾಗಿ ಟಿವಿ9 ಸಂಸ್ಥೆಯ ಎಸ್‌ಸಿಒ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಅಪೂರ್ವ ಬಾಳೆಗೆರೆ ಮಾತಾಡಲಿದ್ದಾರೆ ಎಂದು ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.

ಫೆ. 15ರ ರಾತ್ರಿ 8 ಗಂಟೆಗೆ ಸರಿಯಾಗಿ ಆರಂಭವಾಗಲಿರುವ ವೆಬಿನಾರ್‌ನಲ್ಲಿ “ವ್ಯಾಪಾರದ ಅಭಿವೃದ್ಧಿಗೆ ಡಿಜಿಟಲ್‌ ಮಾರ್ಕೆಟಿಂಗ್‌ ಸೂತ್ರಗಳು ಎಂಬ ವಿಚಾರದ ಬಗ್ಗೆ ಅಪೂರ್ವ ಬಾಳೆಗೆರೆ ತಿಳಿಸಿಕೊಡಲಿದ್ದು, ನಂತರದಲ್ಲಿ ಕಲಾಹಂಸ ಇನ್ಫೋಟೆಕ್‌ ಸಂಸ್ಥೆಯ ಸಿಇಓ ಚಂದನ್‌ ಕಲಾಹಂಸ ಅವರು ಉಚಿತ ಟೂಲ್ಸ್‌ಗಳ ಮೂಲಕ ಹೇಗೆ ಡಿಜಿಟಲೀಕರಣ ಮಾಡಬಹುದು ಎನ್ನುವುದನ್ನೂ ತಿಳಿಸಿಕೊಡಲಿದ್ದಾರೆ. ಇದರ ಕೊನೆಯಲ್ಲಿ ಪ್ರಶ್ನೋತ್ತರ ವೇಳೆಯೂ ಇದ್ದೂ ಯಾವುದೇ ಉದ್ದಿಮೆದಾರರು ತಮ್ಮ ಸಮಸ್ಯೆಗಳನ್ನು ಕೇಳಿ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಈ ವೆಬಿನಾರ್‌ನಲ್ಲಿ ಡಿಜಿಟಲ್‌ ಮಾರ್ಕೆಟಿಂಗ್‌ ಮೂಲಕ ತಿಂಗಳಿಗೆ ಕನಿಷ್ಠ 30000 ಗಳಿಸುವುದು ಹೇಗೆ? ಉಚಿತವಾಗಿ ಗೂಗಲ್‌ನಲ್ಲಿ ಬಿಸಿನೆಸ್‌ ಪ್ರಮೋಷನ್‌ ಮಾಡುವುದು ಹೇಗೆ? ಸೋಷಿಯಲ್‌ ಮೀಡಿಯಾ ನಿರ್ವಹಣೆ ಮಾಡುವುದು ಹೇಗೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದು, ಇದರ ಮೂಲಕ ಸಣ್ಣ ಉದ್ದಿಮೆದಾರರು, ಕ್ಲಿನಿಕ್‌, ಹಾಸ್ಪಿಟಲ್ಸ್‌, ಸ್ಕೂಲ್ಸ್‌, ಗೃಹೋದ್ಯಮಗಳು ಇನ್ನಿತರ ಎಲ್ಲ ವಿಧದ ಬಿಸಿನೆಸ್‌ಗಳೀಗೂ ಉಪಯುಕ್ತವಾಗುವ ವಿಚಾರ ತಿಳಿಯಬಹುದು ಎಂದು ಸಂಸ್ಥೆ ತಿಳಿಸಿದೆ.
ಟಿವಿ 9 ಡಿಜಿಟಲ್ ಸಂಸ್ಥೆಯಲ್ಲಿ SEO ಮ್ಯಾನೇಜರ್ ಆಗಿ ಸುಮಾರು 8 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಪೂರ್ವ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಡಿಜಿಟಲ್ ಮಾರ್ಕೆಟಿಂಗ್ ಫ್ರೀ ಟೂಲ್ಸ್ ಮತ್ತು ಆದಾಯ ಹೆಚ್ಚಿಸುವ ಬಗ್ಗೆ ಮಾಹಿತಿಕೊಡಲಿದ್ದಾರೆ. ಕೇವಲ 99 ರೂಗಳಲ್ಲಿ ಈ ವಿಚಾರಗಳನ್ನು ತಿಳಿದುಕೊಳ್ಳಬಹುದು ಜೊತೆಗೆ ವೆಬಿನಾರ್ ಈ-ಸರ್ಟಿಫಿಕೇಟ್ ಕೂಡ ಪಡೆದುಕೊಳ್ಳಬಹುದಾಗಿದೆ.
ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಆಸಕ್ತಿ ಹೊಂದಿರುವವರು ಅಥವಾ ಆನ್ಲೈನ್ ಬಿಸಿನೆಸ್ ಮೂಲಕ ಹಣಗಳಿಸಲು ಬಯಸುತ್ತಿರುವವರು ತಪ್ಪದೇ ಈ ಅವಕಾಶವನ್ನು ಉಪಯೋಗಿಸಿಕೊಂಡು ಆನ್ಲೈನ್ ಬಿಸಿನೆಸ್ ನಲ್ಲಿ ಸುಲಭವಾಗಿ ಯಶಸ್ಸನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.

RELATED ARTICLES  ಕೆನರಾ ಬ್ಯಾಂಕ್ ಪ್ರಾಯೋಜಿತ ಕೆನ್ ಪಿನ್ ಹೋಮ್ಸ್ ಲಿಮಿಟೆಡ್ (ಸಿಎಫ್‍ಹೆಚ್’ಎಲ್’) ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಸಿನಿಯರ್ ಮ್ಯಾನೇಜರ್, ಪ್ರೋಬೆಷನರಿ ಆಫೀಸರ್ ಹುದ್ದೆಗಳಿಗೆ ನೇಮಕಾತಿ.

ವೆಬಿನಾರ್‌ ಗೆ ಸೇರಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ : https://courses.kalahamsa.in/…/digital-marketing…/