ಶಿರಸಿ : ಶ್ರೀ ಸೋಂದಾ‌ ಸ್ವರ್ಣವಲ್ಲೀ‌ ಮಹಾ‌ಸಂಸ್ಥಾನದಲ್ಲಿ‌ ಸನ್ಯಾಸ‌ ದೀಕ್ಷೆ‌ ಸ್ವೀಕರಿಸಲು ಯಲ್ಲಾಪುರ ತಾಲೂಕಿನ‌ ಈರಾಪುರ ಗಂಗೇಮನೆಯ ಶ್ರೀ ನಾಗರಾಜ ಭಟ್ಟ ಅವರನ್ನು ಅಪಾರ ಶಿಷ್ಯ ಭಕ್ತರ ನಡುವೆ ಶ್ರೀಮಠಕ್ಕೆ ಬರ ಮಾಡಿಕೊಳ್ಳಲಾಯಿತು. ಮಂಗಳವಾರ ಸಂಜೆ ಮಠದ‌ ರಥಬೀದಿಗೆ ಆಗಮಿಸಿದ ಶ್ರೀ ನಾಗರಾಜ ಭಟ್ಟ ಅವರನ್ನು ಡೊಳ್ಳು, ಒಂಚ ವಾದ್ಯ, ವೇದ ಘೋಷಗಳ‌ ಮೂಲಕ ಸ್ವಾಗತಿಸಲಾಯಿತು. ಮಠದ ಪರವಾಗಿ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ ಸ್ವಾಗತಿಸಿದರು. ಸುಮಂಗಲಿಯರು ಪೂರ್ಣಕುಂಭ ಸ್ವಾಗತ ನೀಡಿದರು.

RELATED ARTICLES  ದೇಶಕ್ಕೆ ಒಳಿತಾಗಲಿ, ನಮೋ ಮತ್ತೆ ಪ್ರಧಾನಿಯಾಗಲೆಂದು ಪಾದಯಾತ್ರೆ

ಬಳಿಕ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಾಗರಾಜ ಭಟ್ಟ ಅವರು ಮಠದ ದೇವರಿಗೆ ಫಲ ಸಮರ್ಪಿಸಿ, ಗುರು ಮೂರ್ತಿ ಮನೆಗೆ ಭೇಟಿ ನೀಡಿದರು. ಬಳಿಕ ನಾಗರಾಜ ಭಟ್ಟ ಮಾತಾ ಪಿತೃರಿಗೆ ಗೌರವಿಸಿದರು. ಈವರೆಗಿನ ದಿನಗಳಲ್ಲಿ ಅತ್ಯಂತ ಖುಷಿ, ಸಂತಸದ ಕ್ಷಣ ಇದು. ನಮಗೆ ಅತ್ಯುತ್ತಮ ಶಿಷ್ಯರು ಸಿಕ್ಕರು ಎಂಬುದು ಎಂದು‌ ಶ್ರೀಗಳು ನುಡಿದರು.

RELATED ARTICLES  ಕ್ಯಾಶ್ ಇರದಿದ್ದರೂ ಕ್ಯೂ ಆರ್ ಕೋಡ್ ಮೂಲಕ ಪಡೆಯಬಹುದು ಟಿಕೆಟ್.

ಮಾ.18ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ, ಸಮಾರಂಭ ಹಾಗೂ 22ಕ್ಕೆ ಶಿಷ್ಯ ಸ್ವೀಕಾರ ಕಾರ್ಯಕ್ರಮ ಧರ್ಮಸಭೆ ನಡೆಯಲಿದೆ ಎಂದು ಸ್ವರ್ಣವಲ್ಲೀ ಆಡಳಿತ ಸಮಿತಿ ತಿಳಿಸಿದೆ.