ಕುಮಟಾ : ಖ್ಯಾತ ತೆರಿಗೆ ಸಲಹೆಗಾರ ಹಾಗೂ ವಕೀಲರಾಗಿದ್ದ ತಾಲೂಕಿನ ಕೂಜಳ್ಳಿ ಮೂಲದ ಎಂ.ಕೆ‌ ಹೆಗಡೆ ಮಂಗಳೂರಿನ ಖಾಸಗಿ‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಿವಿಧ ಸಂಘ-ಸಂಸ್ಥೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಂಘ ಸಂಸ್ಥೆಗಳಿಗೆ ಬೆನ್ನೆಲುಬಾಗಿ ನಿಂತವರು. ದಾನಿಗಳಾಗಿ ಸಂಘಟಕರಾಗಿ ಗುರುತಿಸಿಕೊಂಡವರು.

RELATED ARTICLES  ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ.

ಶ್ರೀರಾಮಚಂದ್ರಾಪುರಮಠದ ಶಿಷ್ಯರಾಗಿ, ಜೀವನದುದ್ದಕ್ಕೂ ಅತ್ಯಂತ ನಿಷ್ಠೆಯಿಂದ ಶ್ರೀ ಮಠದ ಸೇವೆ ಮಾಡಿದ್ದ ಕುಮಟಾದ ಕೂಜಳ್ಳಿಯ ಶ್ರೀ ಎಂ.ಕೆ‌ ಹೆಗಡೆ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಇವರ ಪಾರ್ಥಿವ ಶರೀರವನ್ನು ಮಂಗಳೂರಿನಿಂದ ತರಲಾಗುತ್ತಿದ್ದು, ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಕುಮಟಾ ಕೋರ್ಟ ಎದುರಿಗಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

RELATED ARTICLES  ಜನರ ಓಡಾಟದ ದಾರಿ ಬಂದ್ ಗೆ ಮುಂದಾದ ಐ.ಆರ್.ಬಿ : ಆಕ್ರೋಶ ಹೊರಹಾಕಿದ ಭಾಸ್ಕರ ಪಟಗಾರ : ಹೋರಾಟದ ಎಚ್ಚರಿಕೆ.