ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದಾಗಿ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿ ಲಕ್ಷಾಂತರ ರೂಪಾಯಿ ಹಾನಿಯಾಗಿರುವ ಘಟನೆ ಕುಮಟಾ ತಾಲೂಕಿ ತಂಡ್ರಕುಳಿಯ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಬುಧವಾರ ಸಂಜೆ ನಡೆದಿದೆ. ಬೆಂಕಿಯ ತೀವ್ರತೆಗೆ ಕುಟುಂಬಸ್ಥರು ಕೆಲಕಾಲ ಆತಂಕಗೊಂಡು ಮನೆಯಿಂದ ಓಡಿಹೋಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

RELATED ARTICLES  ಫೈರ್ ಬ್ರಾಂಡ್ ಆಗಿ ಗುರುತಿಸಿಕೊಂಡ ಅನಂತಕುಮಾರ ಹೆಗಡೆಗೆ ಟಿಕೆಟ್ ಕೈ ತಪ್ಪಲು ಕಾರಣವೇನು? ಅವರ ಮುಂದಿನ ನಡೆ ಏನಿರಬಹುದು?

ತಂಡ್ರಕುಳಿಯ ರಮೇಶ ಅಂಬಿಗ, ರಾಘವೇಂದ್ರ ಗೋಪಾಲ ಅಂಬಿಗ, ರಮೇಶ ಗೋಪಾಲ ಅಂಬಿಗ, ರಾಮಕೃಷ್ಣಗೋಪಾಲ ಅಂಬಿಗ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಬೆಂಕಿಯ ಕಿಡಿ ಮನೆಯ ಪಕ್ಕದಲ್ಲಿರುವ ತೆಂಗಿನ ಮರಕ್ಕೆ ವ್ಯಾಪಿಸಿದೆ. ತೆಂಗಿನ ಮರದಿಂದ ಮನೆಯ ಮೇಲೆ ಬೆಂಕಿಯ ಕಿಡಿ ಬಿದ್ದ ಪರಿಣಾಮ ಬೆಂಕಿಯ ತೀವ್ರತೆ ಹೆಚ್ಚಾಗಿ ಮನೆ ಪೂರ್ಣವಾಗಿ ಸುಟ್ಟು ಕರಕಲಾಗಿದೆ.

RELATED ARTICLES  ಯಕ್ಷಗಾನ ಕಲಾರಂಗದ ಅರ್ಥಧಾರಿ ಪ್ರಶಸ್ತಿಗೆ ಮೇರು ವಿದ್ವಾನ್ ಉಮಾಕಾಂತ್ ಭಟ್ ಕೆರೇಕೈ ಆಯ್ಕೆ