ಕುಮಟಾ : ರಂಗಭೂಮಿಯ ಮೇಕಪ್ ಆರ್ಟಿಸ್ಟ್ ಕಲಾವಿದ ನಾಗರಾಜ ಭಂಡಾರಿ ಗುರುವಾರ ಬೆಳಗ್ಗಿನ ಜಾವ 5:00 ಗಂಟೆಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕುಮಟಾ ತಾಲೂಕಿನ ಹೆಗಡೆ ನಿವಾಸಿಯಾದ ಇವರು “ಚೈತ್ರಾ ವಸ್ತ್ರಲಂಕಾರ ಹೆಗಡೆ” ಎಂಬ ಮೇಕಪ್ ಸೆಟ್ ಮಾಲಕರಾಗಿ ರಂಗಭೂಮಿ ನಾಟಕಗಳಲ್ಲಿ ಅಮೋಘ ಸೇವೆ ಸಲ್ಲಿಸುತ್ತಾ ಜನಪ್ರಿಯತೆಗಳಿಸಿದ್ದರು.

RELATED ARTICLES  ಬೈಕ್ ಎಗರಿಸಿ ಪರಾರಿಯಾಗುತ್ತಿದ್ದವನ್ನು ಹೆಡೆಮುರಿ ಕಟ್ಟಿದ ಕುಮಟಾ ಪೊಲೀಸರು.

ನಾಟಕ ರಂಗದಲ್ಲಿ ಮೇಕಪ್ ಆರ್ಟಿಸ್ಟ್ ಕಲಾವಿದರಾಗಿ, ಸರಿ ಸುಮಾರು ಮೂರು ದಶಕಗಳಿಂದ ಉತ್ತರ ಕನ್ನಡ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಲ್ಲಿ ತಮ್ಮದೇ ಆದ ಆತ್ಮೀಯ ಬಳಗ ಹೊಂದಿದ್ದರು. ಮೇಕಪ್ ಮತ್ತು ವಸ್ತ್ರಲಂಕಾರದಲ್ಲಿ ಉತ್ತಮ ಪ್ರಾವೀಣ್ಯತೆಯನ್ನು ನಾಗರಾಜ ಭಂಡಾರಿ ಹೊಂದಿದ್ದರು.

RELATED ARTICLES  ಬಾಡದ ರಥೋತ್ಸವ ಸಂಪನ್ನ

ಗಣೇಶೋತ್ಸವದ ಸಂದರ್ಭದಲ್ಲಿ ಗಣೇಶನ ಮೂರ್ತಿ ತಯಾರಿಸುವ ಕಾಯಕದಲ್ಲೂ ನಿರತರಾಗಿರುತಿದ್ದ ಇವರು, ಪತ್ನಿ ಹಾಗೂ ಒಬ್ಬಳು ಮಗಳನ್ನು ಅಗಲಿದ್ದಾರೆ.