ಕುಮಟಾ : ತಾಲೂಕಿನ ಸಂತೇಗುಳಿ ಪಂಚಾಯತದ ಬೆಳಗಲಗದ್ದೆಯಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ ರಸ್ತೆಯನ್ನು ಶಾಸಕಿ ಶಾರದಾಶೆಟ್ಟಿಯವರು ನಿರ್ಮಿಸಿಕೊಟ್ಟು ಜನತೆಯ ಕಷ್ಟ ನೀಗಿದ್ದಾರೆ.

ಬಹು ವರ್ಷಗಳಿಂದ ಇಲ್ಲಿಯ ಜನರು ರಸ್ತೆ ಸರಿಯಾಗಿಲ್ಲದೆ ಪರದಾಡುತ್ತಿದ್ದರು. ಮೂಲ ಸೌಕರ್ಯಗಳೇ ಇಲ್ಲದಂತಿದ್ದ ಈ ಗ್ರಾಮದ ಸ್ಥಿತಿ ನೋಡಿದ ಶಾಸಕಿ ಶಾರದಾ ಮೋಹನ ಶೆಟ್ಟಿ ರಸ್ತೆ ನಿರ್ಮಾಣಕ್ಕೆ ಮುಂದಾದರು. ಶಾಸಕರು ಅನುದಾನ ಬಿಡುಗಡೆ ಮಾಡಿ ರಸ್ತೆ ಮಾಡಿಸಿಕೊಟ್ಟ ಪರಿಣಾಮ ನಮಗೆ ಬಹಳ ಸಂತಸವಾಗಿದೆ ಎನ್ನವುದು ಇಲ್ಲಿಯ ಜನರ ಮಾತು.

RELATED ARTICLES  ಭಟ್ಕಳ ಸಹೋದರರು ಸೇರಿದಂತೆ 18 ಮಂದಿಯನ್ನು ಉಗ್ರರೆಂದು ಘೋಷಣೆ

ರಸ್ತೆ ನಿರ್ಮಾಣ ಮಾಡಿಕೊಟ್ಟ ಶಾಸಕರಿಗೆ ಅಭಿನಂದನೆ ಸಲ್ಲಿಸಲು ಗ್ರಾಮದ ಪ್ರಮುಖರು ಶ್ರೀಮತಿ ಶಾರದಾ ಶೆಟ್ಟಿಯವರ ಮನೆಗೆ ಬಂದು ಅವರಿಗೆ ಪುಷ್ಪಗುಚ್ಚ ನೀಡಿ ಅವರನ್ನು ಅಭಿನಂದಿಸಿದರು.

RELATED ARTICLES  ಉತ್ತರಕನ್ನಡ ಕೊರೋನಾ ಹೆಲ್ತ ಬುಲೆಟಿನ್