ಕುಮಟಾ ಪಟ್ಟಣದ ಹೃದಯ ಭಾಗದ ರಥಬೀದಿಯಲ್ಲಿ ನೆಲೆನಿಂತ ಶ್ರೀ ವೆಂಕಟರಮಣ ದೇವರ ಮಹಾರಥೋತ್ಸ, ಅತ್ಯಂತ ವಿಜ್ರಂಭಣೆಯಿoದ ಧಾರ್ಮಿಕ ವಿಧಿ ವಿಧಾನದಂತೆ ಸಂಪನ್ನಗೊoಡಿತು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾಧಿಗಳು ಮಹಾರಥೋತ್ಸವವನ್ನು ಕಣ್ತುಂಬಿಕೊoಡರು. ಶ್ರೀ ವೆಂಕಟರಮಣ ದೇವರ ಮಹಾರಥೋತ್ಸವದ ಪ್ರಯುಕ್ತ ವೆಂಕಟೇಶ್ವರನಿಗೆ ಹರಕೆ ತೀರಿಸಲೆಂದು ದೂರದ ಊರುಗಳಿಂದ ಆಗಮಿಸಿದ ಭಕ್ತಾಧಿಗಳು ಪೂಜೆ ಸಲ್ಲಿಸಿ ಧನ್ಯತಾ ಭಾವ ಮೆರೆದರು.
ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೇರವೇರಿದ್ದು, ಬಳಿಕ ಸಂಜೆಯ ವೇಳೆ ಮಹಾರಥೋತ್ಸವ ಸಂಪನ್ನಗೊoಡಿತು. ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಶ್ರೀದೇವರ ದರ್ಶನ ಪಡೆದು, ರಥ ಎಳೆದು ಕೃತಾರ್ಥರಾದರು.ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಗುರುಗಳಾದ ಶ್ರೀ ವಿದ್ಯಾದೀಶ ತೀರ್ಥ ಸ್ವಾಮಿಜಿಯವರು ಉಪಸ್ಥಿತರಿದ್ದು, ಪೂಜಾ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.