ಪ್ರಸಿದ್ಧ ಶಕ್ತಿ ಕ್ಷೇತ್ರವಾದ ಗೋರೆಯ ಶ್ರೀ ಗೋಪಾಲಕೃಷ್ಣ ದೇವರ ರಥೋತ್ಸವವು ಶುಕ್ರವಾರ ರಥಸಪ್ತಮಿಯಂದು ಧಾರ್ಮಿಕ ವಿಧಿವಿಧಾನದಂತೆ ನೆರವೇರಿತು. ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ರಥೋತ್ಸವ ನಡೆದು ಸಂಪನ್ನಗೊಂಡಿತು. ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಊರಿನ ಹಾಗೂ ಪರ ಊರಿನ ನೂರಾರು ಜನರು ಬಂದು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹರಕೆ ಸಲ್ಲಿಸಿದರು.

RELATED ARTICLES  ಸಿವಿಎಸ್‌ಕೆಯ ಕೃತಿಕಾ ನ್ಯಾಶನಲ್‌ ರನ್ನರ್‌ ಅಪ್‌ : ರಾಷ್ಟ್ರಮಟ್ಟದಲ್ಲಿ ಮಿಂಚಿದ ಕೊಂಕಣದ ಪ್ರತಿಭೆ.