ಅಂಕೋಲಾ : ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಬಿದ್ದು ಬೈಕ್ ಹಿಂಬದಿ ಕುಳಿತ್ತಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ತಾಲೂಕಿನ ಬೆಳಸೆ ರಾ.ಹೆ 66 ಮೆಲ್ಸೆತುವೆ ಬಳಿ ನಡೆದಿದೆ.

RELATED ARTICLES  ತೋಟದ ಮನೆಯಲ್ಲಿ ನೇಣಿಗೆ ಶರಣಾದ ಕ್ಲಾಸ್ ೧ ಗುತ್ತಿಗೆದಾರ.

ಕುಮಟಾ ತಾಲೂಕಿನ ಕಿಮಾನಿ ನಿವಾಸಿಯಾಗಿರುವ ಬಾಗಿ ಸುರೇಶ ಹರಿಕಂತ್ರ ಸ್ಥಳದಲ್ಲಿಯೇ ಮೃತಪಟ್ಟ ಮಹಿಳೆಯಾಗಿದ್ದಾರೆ. ಬೈಕ್ ಸವಾರ ದೇವೆಂದ್ರ ಜಟ್ಟಿ ಹರಿಕಂತ್ರರಿಗೆ ಗಂಭೀರವಾಗಿ ಗಾಯಗಳಾಗಿದೆ. ಇವರು ಕಿಮಾನಿಯಿಂದ ಅಂಕೋಲಾ‌ ದೇವಸ್ಥಾನವೊಂದಕ್ಕೆ ಹೋಗುತ್ತಿರುವ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಅಂಕೋಲಾ ಪೊಲೀಸ್ ಠಾಣೆಯ ಪಿಎಸ್ಐ ಉದ್ದಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕಣ ದಾಖಲಿಸಿಕೊಂಡಿದ್ದಾರೆ.

RELATED ARTICLES  ಕುಸಿದು ಬಿತ್ತು ಸೇತುವೆ : ಮುಳುಗಿದೆ ವಾಹನ..? ಮಳೆಯ ಅವಾಂತರಕ್ಕೆ ಹೆದ್ದಾರಿ ಬಂದ್..!