ಕುಮಟಾ : ಸ್ಯಾಂಡಲ್‌ವುಡ್ ನಟ, ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಕುಟುಂಬ ಚಿತ್ರಾಪುರ ಸಂಸ್ಥಾನವಾದ ಕುಮಟಾದ ಮಲ್ಲಾಪುರ ಗುರು ಮಠಕ್ಕೆ ಗುರುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮಕ್ಕಳು ಹಾಗೂ ಅತ್ತೆ, ಮಾವ ಸಮೇತ ಗುರುಮಠಕ್ಕೆ ಆಗಮಿಸಿದ ಯಶ್ ಕೆಲ ಹೊತ್ತು ಗುರುಮಠದಲ್ಲಿ ಇದ್ದು, ದೇವರ ದರ್ಶನ ಪಡೆದರು. ಸಂಜೆ ವೇಳೆ ಶಿರಾಲಿ ಚಿತ್ರಾಪುರ ಮಠಕ್ಕೆ ತೆರಳಿದ್ದು, ಅಲ್ಲಿಯೇ ವಾಸ್ತವ್ಯ ಮಾಡಿದ್ದಾರೆ‌.

RELATED ARTICLES  ಕುಕ್ಕರ್ ಬಾಂಬ್ ಸ್ಫೋಟಕ್ಕೂ ಮುನ್ನ ಕರಾವಳಿಯಲ್ಲಿ ಸ್ಯಾಟಲೈಟ್ ಫೋನ್ ರಿಂಗಣ..?

ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಯಶ್ ಸದ್ಯ ಸಿನಿಮಾದಲ್ಲಿ ಫುಲ್ ಬ್ಯುಸಿಯಾಗಿದ್ದರು. ಈ ಬ್ಯುಸಿ ಶೆಡ್ಯುಲ್ ನಡುವೆಯೂ ತಮ್ಮ ಸಂಬಂಧಿಕರೊಂದಿಗೆ ಕೆಲಕಾಲ ಭಾಗಿಯಾದರು. ರಾಧಿಕಾ ತಂದೆ ಕೃಷ್ಣಪ್ರಸಾದ್ ಪಂಡಿತ್ ತಾಯಿ ಮಂಗಳಾ ಅವರೂ ಸಹ ಜೊತೆಗಿದ್ದರು. ಮಲ್ಲಾಪುರ ಗುರು ಮಠಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ನಟ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಸಂಬಂಧಿಕರಾದ ಗುರುಪ್ರಸಾದ ಭಟ್ಟ ಅವರ ಮನೆಗೆ ಭೇಟಿ ನೀಡಿ ಗುರುಪ್ರಸಾದ ಭಟ್ಟ ಅವರ ಕುಟುಂಬದವರೊಂದಿಗೆ ಕೆಲಕಾಲ ಸಂಭ್ರಮಿಸಿದರು.

RELATED ARTICLES  ನವಜಾತ ಶಿಶುವನ್ನೇ ರಟ್ಟಿನ ಬಾಕ್ಸ್ ನಲ್ಲಿಟ್ಟು ರಸ್ತೆಯಲ್ಲಿ ಬಿಟ್ಟುಹೋದ ತಾಯಿ.