ಪುರಾಣ ಪ್ರಸಿದ್ದ ಕ್ಷೇತ್ರ ಹೊನ್ನಾವರ ತಾಲೂಕಿನ ಇಡಗುಂಜಿಯ ಶ್ರೀ ಮಹಾಗಣಪತಿ ದೇವರ ಮಹಾಸ್ಯಂದನ ರಥೋತ್ಸವ ಸಂಪನ್ನವಾಯಿತು. 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಇಡಗುಂಜಿ ಶ್ರೀ ಮಹಾಗಣಪತಿ ದೇವ ನಾರದ ಮಹರ್ಷಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ವಾಲಿಖಿಲ್ಯ ಮುನಿಗಳು ತಪಃಸಿದ್ದಿ ಪಡೆದ ಕ್ಷೇತ್ರ ಎಂಬ ಪ್ರತೀತಿಯನ್ನು ಹೊಂದಿದೆ.

RELATED ARTICLES  ಮೇ ೧೦ ರಂದು ಬಂಗಾರಮಕ್ಕಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಲಾನ್ಯಾಸ

ಭಕ್ತರ ಪಾಲಿಗೆ ಸಿದ್ದಿ ಕ್ಷೇತ್ರ ಎಂದೇ ಪ್ರಸಿದ್ದಿ ಹೊಂದಿರುವ ಇಡಗುಂಜಿ ಮಹಾಗಣಪತಿಗೆ ದೇಶದ ನಾನಾ ಭಾಗಗಳಲ್ಲದೆ ವಿದೇಶಗಳಲ್ಲಿ ನೆಲಸಿರುವವರೂ ನಡೆದುಕೊಳ್ಳುತ್ತಾರೆ. ನಂಬಿದವರನ್ನು ಕೈಬಿಡುವುದಿಲ್ಲ ಎಂಬ ನಂಬಿಕೆಯುಳ್ಳ ಇಡಗುಂಜಿ ವಿನಾಯಕ ದೇವ ಲಕ್ಷೋಪಲಕ್ಷ ಭಕ್ತರನ್ನು ಸೆಳೆಯುತ್ತಿದ್ದಾನೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಮಹಾಗಣಪತಿಯ ದರ್ಶನ ಪಡೆಯುತ್ತಿದ್ದು, ಗಣೇಶ ಚತುರ್ಥಿ, ಸಂಕಷ್ಟಹರ ಚತುರ್ಥಿ, ರಥಸಪ್ತಮಿಗಳಲ್ಲಿ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

RELATED ARTICLES  ಫೇ. 18 ರಂದು ಶಿಲ್ಪಿ ಗಣೇಶ ಭಟ್ಟರಿಗೆ ಸನ್ಮಾನ