ಸಾಗರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರ ನಡುವೆ ತಿಕ್ಕಾಟ ಇದೇ ಮೊದಲಲ್ಲ. ಈ ಹಿಂದೆ ಶಾಸಕರಾಗಿದ್ದ ಹರತಾಳು ಹಾಲಪ್ಪ ಬೆಂಬಲಿಗರ ಗುಂಪು ಕಟ್ಟಿಕೊಂಡು ತಾವೇ ಸ್ವತಃ ನಿಂತು ಪಕ್ಷದ ಕಾರ್ಯಕರ್ತರಿಗೆ ಹಲ್ಲೆ ಮಾಡಿದ ಘಟನೆ ನಡೆದು, ವಿಧಾನಸಭಾ ಚುನಾವಣೆ ಸಂದರ್ಭ ಕಾರ್ಯಕರ್ತರ ವಿರೋಧದ ನಡುವೆಯೂ ಮತ್ತೆ ಹಾಲಪ್ಪಗೇ ಟಿಕೆಟ್ ಸಿಕ್ಕು ಕಾರ್ಯಕರ್ತರ ವಿರೋಧದಿಂದಲೇ ಸೋಲನುಭವಿಸಿದ್ದು ಜಾಹೀರು. ಕಾರ್ಯಕರ್ತರೆ ಬೆನ್ನೆಲುಬು ಎಂಬುವ ಬಿಜೆಪಿ ಕಾರ್ಯಕರ್ತರ ಎದುರು ಹಾಕಿಕೊಂಡು ಸೋಲುಂಡ ಸಾಕಷ್ಟು ಉದಾಹರಣೆಗಳೂ ಸಾಕಷ್ಟಿವೆ.

ವಿಧಾನಸಭಾ ಚುನಾವಣೆಯಲ್ಲಿ ವಿರೋಚಿತ ಸೋಲುಂಡ ಕರ್ನಾಟಕ ಬಿಜೆಪಿ, ರಾಜ್ಯಾಧ್ಯಕ್ಷ ಸೇರಿದಂತೆ ರಾಜ್ಯದ ಎಲ್ಲಾ ಜವಾಬ್ದಾರಿ ಹುದ್ದೆಗಳನ್ನು ಬದಲು ಮಾಡುತ್ತಿದೆ. ಇತ್ತೀಚೆಗೆ ಯಡಿಯೂರಪ್ಪ ಸುಪುತ್ರ ವಿಜಯೇಂದ್ರ ಅವರನ್ನು ರಾಜ್ಯ ಅಧ್ಯಕ್ಷರಾಗಿ ಘೋಷಿಸಿ, ರಾಜ್ಯದ ಕಮಿಟಿ, ಜಿಲ್ಲಾ ಅಧ್ಯಕ್ಷರು ಮತ್ತು ಕಮಿಟಿ, ರಾಜ್ಯ ಮತ್ತು ಜಿಲ್ಲೆಯ ಎಲ್ಲಾ ಮೋರ್ಚಾಗಳ ಕಮಿಟಿ ಮತ್ತು ತಾಲೂಕು ಕಮಿಟಿಗಳನ್ನೂ ಬದಲಾವಣೆ ಮಾಡುತ್ತಿದೆ.

RELATED ARTICLES  ಸಂತಸದ ಸುದ್ದಿ: ಐಟಿ ರಿಟರ್ನ್ಸ್ ಅಂತಿಮ ದಿನಾಂಕ ಅಕ್ಟೋಬರ್ 15ಕ್ಕೆ ವಿಸ್ತರಣೆ.

ಅದರಲ್ಲೂ ಚುನಾವಣೆಯಲ್ಲಿ ಸೋಲುಂಡ ಹರತಾಳು ಹಾಲಪ್ಪ ಅವರನ್ನು ರಾಜ್ಯ ಉಪಾಧ್ಯಕ್ಷ ಎಂದು ಘೋಷಿಸಿದ್ದು ಕಾರ್ಯಕರ್ತರಿಗೇ ಆಶ್ಚರ್ಯ ತಂದಿತ್ತು.

ಈಗ ಶಿವಮೊಗ್ಗ ಜಿಲ್ಲೆ ಸಾಗರ ಕ್ಷೇತ್ರದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ಹಾಲಪ್ಪ ಮತ್ತು ಮೇಘರಾಜ್ ಬೆಂಬಲಿಗರಿಗೇ ಪಕ್ಷದ ಹುದ್ದೆ ಸ್ಥಾನಮಾನ ನೀಡುತ್ತಿರುವುದು ಪಕ್ಷದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

RELATED ARTICLES  ರಾಜ್ಯದಲ್ಲಿ ಒಂದೇ ಸಂಘದಡಿಯಲ್ಲಿ ಒಂದಾದ ಸರ್ಕಾರಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರು.

ಸಾಗರ ಗ್ರಾಮಾಂತರ ಮತ್ತು ಸಾಗರ ನಗರ ಮಂಡಲ ಸಮಿತಿ ವಿವಿದ ಮೋರ್ಚಾಗಳು ಮತ್ತು ಜಿಲ್ಲೆಯ ಮೊರ್ಚಾಗಳಲ್ಲಿ ಹಾಲಪ್ಪ ಪಟಾಲಂಗಳಿಗೆ ಹುದ್ದೆ ನೀಡಿದ್ದು ಕಾರ್ಯಕರ್ತರು ಅಸಮಾಧಾನಕ್ಕೆ ಕಾರಣವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಅಸಮಾಧಾನ ಯಾವ ರೀತಿ ಕೆಲಸ ಮಾಡಬಹುದು, ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಆದಂತಯೇ ಪಕ್ಷದ ಕಾರ್ಯಕರ್ತರ ಅಸಮಾಧಾನ ಕಾಂಗ್ರೇಸ್‌ಗೆ ವರದಾನ ಆಗುವುದೇ??? ಎಂದು ಸಾಗರದ ಜನತೆ ಮಾತಾನಾಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಸಂಸದ ಬಿ.ವೈ ರಾಘವೇಂದ್ರ ಏನು ಮಾಡುತ್ತಾರೆ ಕಾದು ನೋಡಬೇಕಿದೆ.