ಕುಮ‍ಟಾ : ಕುಮಟಾ ತಾಲೂಕಿನ ಕಾಗಲ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವ ರಸ್ತೆ ಸಂಪೂರ್ಣವಾಗಿ ಕಳಪೆಯಾಗಿದ್ದು ಸಾರ್ವಜನಿಕರಿಗೆ ಪ್ರಯಾಣಿಸಲು ತಲೆ ನೋವಾಗಿ ಪರಿಣಮಿಸಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಇಲ್ಲಿಯ ಜನರ ದೂರು.

RELATED ARTICLES  ಭಟ್ಕಳದಲ್ಲಿ ವೃದ್ಧೆಯನ್ನು ಬಲಿ ಪಡೆದ ನಾಯಿ: ಇಬ್ಬರ ಸ್ಥಿತಿ ಗಂಭೀರ

ಇಲ್ಲಿಯೇ ಪಕ್ಕದಲ್ಲಿ ಇರುವ ಸಮುದ್ರದಂಚಿನಲ್ಲಿ ತಡೆಗೋಡೆ ನಿರ್ಮಾಣ ಆಗುತ್ತಿದ್ದು ಅಲ್ಲಿ ಬರುವ ಅತಿ ಬಾರದ ವಾಹನಗಳು ಇದೇ ದಾರಿಯಲ್ಲಿ ಸಂಚಾರ ಮಾಡಿರುವುದರಿಂದ ರಸ್ತೆ ಹಾಳಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

RELATED ARTICLES  ಮಕ್ಕಳಿಗೆ ನ್ಯೂಟ್ರಿಷೆನ್ ಫುಡ್ ಕಿಟ್‌ಗಳನ್ನು ಹಸ್ತಾಂತರಿಸಿದ ಶಾಸಕ ದಿನಕರ ಶೆಟ್ಟಿ

ಸಮಸ್ಯೆ ಬಗೆಹರಿಸಲು ತೀವೃವಾಗಿ ಒತ್ತಾಯಿಸಿದ ಜನರು ರಸ್ತೆ ಮಧ್ಯೆ ಗಿಡ ನೆಟ್ಟು ಪ್ರತಿಭಟನೆ ಮಾಡಿದ್ರು. ಇಲಾಖೆಯವರೇ ಒಂದು ಸಲ ಈ ಭಾಗಕ್ಕೆ ಬಂದು ನೋಡಿ ಎಂಬುದು ಸ್ಥಳೀಯರ ಮಾತು.