ಕುಮಟಾ : ಭಾರತೀಯ ಜನತಾ ಪಾರ್ಟಿಯ ಕುಮಟಾ ಮಂಡಲದ ನೂತನ ಅಧ್ಯಕ್ಷರಾಗಿ ಜಿ. ಐ ಹೆಗಡೆ (ಗಣಪತಿ ಈಶ್ವರ ಹೆಗಡೆ) ಆಯ್ಕೆಯಾಗಿದ್ದಾರೆ. ಈ ಹಿಂದೆ ಇವರು ಕುಮಟಾ ಮಂಡಲದ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಬಿಜೆಪಿ ಪಕ್ಷದ ವಿವಿಧ ಸ್ಥರಗಳಲ್ಲಿ ಗುರುತಿಸಿಕೊಂಡಿರುವ ಇವರು, ಸಹಕಾರ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡವರು. ಪಿ.ಎಲ್.ಡಿ ಬ್ಯಾಂಕ್ ಕುಮಟಾದ ಉಪಾಧ್ಯಕ್ಷರಾಗಿ ಇವರು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

RELATED ARTICLES  7 ರ‍್ಯಾಂಕುಗಳನ್ನು ಪಡೆದಿದ್ದ ಸಿ.ವಿ.ಎಸ್.ಕೆ ಪ್ರೌಢಶಾಲೆಗೆ, ಮರುಮೌಲ್ಯಮಾಪನದಿಂದಾಗಿ ಇನ್ನೂ 5 ರ‍್ಯಾಂಕುಗಳ ಸೇರ್ಪಡೆ.

ಇನ್ನು ಕುಮಟಾ ಮಂಡಲದ ಪ್ರಧಾನ ಕಾರ್ಯದರ್ಶಿಗಳಾಗಿ ವಿನಾಯಕ ನಾಯ್ಕ ಹಾಗೂ ಗೋಕರ್ಣದ ಗಣೇಶ ಪಂಡಿತ ಆಯ್ಕೆಯಾಗಿದ್ದಾರೆ.